ಬೆಂಗಳೂರು: ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ ಎಂಬ ಭರವಸೆ ನೀಡಿದ್ದೇನೆ. ಕೋಲಾರದಲ್ಲಿ ನನಗೆ ಅನುಭವ ಇದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ (K.H.Muniyappa) ತಿಳಿಸಿದರು.
ಎರಡು ಬಣದವರು ಒಟ್ಟಾಗಿ ಕೆಲಸ ಮಾಡುತ್ತೇವೆ. ಯಾರಿಗಾದರು ಟಿಕೆಟ್ ಕೊಡಿ ಅಂತ ರಮೇಶ್ ಕುಮಾರ್ ಹೇಳಿದ್ದರು. ವೇಣುಗೋಪಾಲ್, ಸುರ್ಜೆವಾಲ, ಖರ್ಗೆ ಅವರು ಸಮಚಿತ್ತದಿಂದ ತೋರಿದ್ದಾರೆ. ನಾವು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಗೆಲ್ಲಬೇಕು. ಸಿಎಂ, ಡಿಸಿಎಂಗೂ ನಾನು ಮನವಿ ಮಾಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಬ್ಬರನ್ನೂ ಒಪ್ಪಲ್ಲ. ಸೋಲಲಿ ಅಥವಾ ಗೆಲ್ಲಲಿ ಬೇರೆ ಕ್ಯಾಂಡಿಡೇಟ್ ಕೊಡ್ತೀವಿ ಎಂದು ಕೈ ತೊಳೆದುಕೊಳ್ಳುವುದು ಸರಿಯಲ್ಲ. ಅವರದು ಬೇಡ, ನಿಮ್ಮದು ಬೇಡ ಅಂದರೆ ಬಂದವರಿಗೆ ಕಷ್ಟ ಆಗುತ್ತೆ. ಪಾಪ ಅವರನ್ನ ಕಷ್ಟಕ್ಕೆ ಸಿಲುಕಿಸುವುದು ಬೇಡ ಎಂದು ಎಚ್ಚರಿಕೆ ಮಾತನಾಡಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?
Advertisement
Advertisement
ಒಮ್ಮತದ ಅಭ್ಯರ್ಥಿ ಆದರೆ ಎಲ್ಲರೂ ಸೇರಿ ಕೆಲಸ ಮಾಡಬಹುದು. ನಾನು ಅಘಾದವಾದ ನೋವಲ್ಲಿ ಇದ್ದೇನೆ. ಆದರೆ ಪಕ್ಷ ಮುಖ್ಯ. ಎಡಗೈ ಬಲಗೈ ಎಲ್ಲ ಇಲ್ಲ. ಎಲ್ಲಾ ವರ್ಗದ ಜನ ವೋಟ್ ಹಾಕಿದ್ದಕ್ಕೆ 30 ವರ್ಷ ಪಾರ್ಲಿಮೆಂಟ್‌ಗೆ ಹೋಗಿದ್ದೇನೆ ನಾನು. ಅವರು ಯಾರಿಗೆ ಕೊಟ್ಟರೂ ಒಪ್ಪಿಕೊಳ್ಳುತ್ತೇನೆ. ನನ್ನ ಸಮುದಾಯ ಕಟ್ಟಿಕೊಂಡು ಹಣೆಬರಹ ಬರೆದುಕೊಳ್ಳೋಕೆ ಆಗಲ್ಲ. ಯಾವುದೇ ಸಮುದಾಯಕ್ಕೆ ಟಿಕೆಟ್ ಕೊಟ್ರೂ ಒಪ್ಪಿಕೊಳ್ಳುವೆ. ಆದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್‌ಗೆ ವೋಟ್ ಕೇಳಬೇಕು ಎಂದು ಹೇಳಿದರು.
Advertisement
ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ, ಎಂಎಲ್‌ಸಿ ಎಲ್ಲಾ ಹಂತದಲ್ಲಿ ಕೆಲಸ ಮಾಡಿ ಕೋಲಾರವನ್ನ ಕಾಂಗ್ರೆಸ್ ಭದ್ರಕೋಟೆ ಮಾಡಿದ್ದೇನೆ. ಸಾಕಷ್ಟು ಶಾಸಕರು ಪರಿಷತ್ ಸದಸ್ಯರನ್ನ ಬೆಳೆಸಿದ್ದೇನೆ. ರಮೇಶ್ ಕುಮಾರ್ ಹಾಗೂ ನಾವೆಲ್ಲಾ ಒಟ್ಟಿಗೆ ಕುಳಿತು ಮಾತನಾಡಿದ್ದೆವು. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಿಗೆ ಕೆಲಸ ಮಾಡೋಣ ಅಂತ ಮಾತನಾಡಿದ್ದೆವು. ನಾನು ಮತ್ತೊಮ್ಮೆ ಮನವಿ ಮಾಡಿದ್ದೇನೆ. ನನಗೆ ಅವಕಾಶ ಮಾಡ್ಕೊಡಿ ಅಂತ. ನಾನು ಹೇಳಿದ ಅಭ್ಯರ್ಥಿಗೆ ಅವಕಾಶ ಕೊಟ್ಟರೆ ಗೆಲ್ಲಿಸಿಕೊಂಡು ಬರ್ತೇನೆ ಅಂತ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ನನ್ನ ಭಾವನೆ. ರಮೇಶ್ ಕುಮಾರ್ ಹಿರಿಯರು, ಅವರೂ ಕೂಡ ನಿನ್ನೆ ಹಾಜರಿರಲಿಲ್ಲ. ನಾವು ಎಲ್ಲರೂ ಒಟ್ಟಿಗೆ ಸೇರಿದಾಗ ರಮೇಶ್ ಕುಮಾರ್ ಎಲ್ಲ ಭಿನ್ನಾಭಿಪ್ರಾಯ ಬಿಟ್ಟು ಕೆಲಸ ಮಾಡ್ತೇವೆ ಅಂದಿದ್ದರು. ಅವರೇ ಈ ಮಾತನ್ನು ಹೇಳಿದ್ದರು. ನಾನು ಸೋತಲ್ಲಿ, ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ – ಐಟಿ ಇಲಾಖೆಯಿಂದ 1,700 ಕೋಟಿ ಮೊತ್ತದ ಡಿಮ್ಯಾಂಡ್ ನೋಟಿಸ್
Advertisement
ನನ್ನ ಮನಸ್ಸಲ್ಲಿ ಆಘಾತ ಇದೆ ನೋವಿದೆ. ನಾವೆಲ್ಲರೂ ಸ್ವಪ್ರತಿಷ್ಟೆ ಬಿಟ್ಟು ಕೆಲಸ ಮಾಡೋಣ. ನಾನು ಬಹಳ ನೋವಲ್ಲಿದ್ದೇನೆ. ನನ್ನ ನೋವು ದೊಡ್ಡದಲ್ಲ, ಕಾಂಗ್ರೆಸ್ ದೊಡ್ಡದು. ಮೂರನೇ ಅಭ್ಯರ್ಥಿ ಬಗ್ಗೆ ಯೋಚನೆ ನಾನು ಮಾಡಿಯೇ ಇಲ್ಲ. ನಾನು ಯಾರಿಗೂ ಪ್ರಪೋಸಲ್ ಮಾಡಿಲ್ಲ. ನಾನು ಎಡಗೈ ಬಲಗೈ ವಿಷಯ ಮಾತ್ರ ಹೇಳ್ತಿಲ್ಲ. ನಾನು ಅದಕ್ಕಿಂತ ಮೇಲಿದ್ದೇನೆ. ನಾನು ರಮೇಶ್ ಕುಮಾರ್ ಮನೆ ಹತ್ರ ಹೋಗಿದ್ದೆ ಅವರೇ ಸಿಗಲಿಲ್ಲ. ನಾನೇ ಕಾಂಗ್ರೆಸ್ ಉಳಿಬೇಕು ಅಂತ ಅವರ ಮನೆಗೆ ಹೋದೆ. ಕಾಂಗ್ರೆಸ್ ಆಫೀಸಲ್ಲೇ ಮಾತಾಡಿದೆ, ಅವರೇ ಎಲ್ಲವನ್ನೂ ಬಿಟ್ಟುಬಿಡೋಣ ಅಂತ ಮಾತನಾಡಿದರು. ನಾನು ಕಾಂಗ್ರೆಸ್‌ಗಾಗಿ ಸ್ವಪ್ರತಿಷ್ಠೆ ಮಾಡೋದು ಒಳ್ಳೆಯದಲ್ಲ, ಪ್ರತಿಷ್ಠೆ ಮಾಡುತ್ತಿಲ್ಲ. ರಮೇಶ್ ಕುಮಾರ್ ಕೂರಿಸಿಕೊಂಡು ಸಿಎಂ ಮಾತನಾಡಲಿ. ನಾನು ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿ ಅಂತಲೇ ಕೇಳಿದ್ದೇನೆ ಎಂದರು.
ಬೇರೆ ಕಡೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ಕೋಲಾರದ್ದು ಮಾತ್ರ ಯಾಕೆ ಬಗೆಹರಿಯುತ್ತಿಲ್ಲ? ಸಿಎಂ, ಡಿಸಿಎಂಗೆ ಕೋಲಾರದ ಸಮಸ್ಯೆ ಬಗೆಹರಿಸಬೇಕಾದ ದೊಡ್ಡ ಜವಾಬ್ದಾರಿ ಇದೆ. ಯಾರು ಸಮಸ್ಯೆ ಬಗೆಹರಿಸಬೇಕಿತ್ತೋ ಅವರ ಮನಸ್ಸು ಸ್ವಲ್ಪ ದೊಡ್ಡದಾದರೆ ಸಮಸ್ಯೆ ಬಗೆಹರಿಯುತ್ತದೆ. ಎಲ್ಲ ಕಡೆಯದ್ದೂ ಸಂಧಾನ ಆಗುತ್ತದೆ. ಕೋಲಾರದ್ದು ಮಾತ್ರ ಯಾಕೆ ಸಂಧಾನ ಆಗ್ತಿಲ್ಲ ಎಂದು ಪರೋಕ್ಷವಾಗಿ ಸಿಎಂ, ಡಿಸಿಎಂಗೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮಾತನಾಡಲು ಬಾರದ ಇವರು ಅಡುಗೆ ಮಾಡೋದಕ್ಕೆ ಲಾಯಕ್ಕು: ಸಿದ್ದೇಶ್ವರ್ ಪತ್ನಿ ವಿರುದ್ಧ ಶಾಮನೂರು ಹೇಳಿಕೆ