ಬೆಂಗಳೂರು: 50 ವರ್ಷ ಮೀರದ ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದು, ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿ, ಕಾನೂನಿನಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ದೇವರನ್ನು ನೋಡಲು ಪುಣ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ದೇವರನ್ನು ನೋಡುವ ಯೋಗ ಸಿಕ್ಕಿದ್ದರಿಂದ ಹೋಗಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಇಬ್ಬರು ಮಹಿಳೆಯರ ಪ್ರವೇಶ: ಶಬರಿಮಲೆ ಅಯ್ಯಪ್ಪ ದೇವಾಲಯ ಬಂದ್
Advertisement
Advertisement
ಬಹುಸಂಖ್ಯಾತ ಭಕ್ತರ ಮನಸ್ಸಿಗೆ ನೋವುಂಟು ಮಾಡಿ ದೇಗುಲ ಪ್ರವೇಶಿಸಿದ್ದು ಎಷ್ಟು ಸರಿ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಇದು ಭಕ್ತಿ ಮತ್ತು ದೇವರ ವಿಚಾರವಾಗಿದೆ. ಬಲತ್ಕಾರವಾಗಿ ಯಾವುದೋ ಬೇರೆ ಜನಾಂಗದವರು ಬಂದಿದ್ದಲ್ಲ. ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದರಲ್ಲಿ ತಪ್ಪೇನಿದೆ? ದೇವರನ್ನು ನೋಡಬೇಕು ಎಂಬ ಆಸೆಯಿಂದ ಹೋಗಿದ್ದಾರೆ. ದೇವರು ಕೂಡ ಅವರಿಗೆ ಕೃಪೆ ಕೊಟ್ಟಿದ್ದಾನೆ. ಒಟ್ಟಿನಲ್ಲಿ ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೋಗಿದ್ದಾರೆ ಅಷ್ಟೇ. ಅವರು ಪುಣ್ಯ ಮಾಡಿದ್ದಾರೆ. ನಾನು ಯಾವತ್ತೂ ದೇವರನ್ನು ಅಷ್ಟಕ್ಕೆ ಯೋಚನೆ ಮಾಡುತ್ತೇನೆ ಅಂದ್ರು. ಇದನ್ನೂ ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!
Advertisement
Advertisement
ಈ ಜಗತ್ತಿನಲ್ಲಿ ಎಲ್ಲಾ ಅನಿಷ್ಠ ಪದ್ಧತಿಗಳಿಂದ ಹಿಡಿದು ಮನುಷ್ಯನ ಭಾವನೆಗಳನ್ನು ಎಲ್ಲವನ್ನೂ ಕೂಡ ಕಾನೂನಾತ್ಮಕವಾಗಿಯೇ ನಾವು ಬದಲಾಯಿಸಿದ್ದೇವೆ. ಕೆಲವೊಂದಕ್ಕೆ ಕಾನೂನು ಇಲ್ಲ ಅಂತಂದ್ರೆ ಈ ಪ್ರಪಂಚದಲ್ಲಿ ನಮ್ಮಲ್ಲಿ ಎಷ್ಟೊಂದು ಕಾನೂನುಗಳು ರೂಪುಗೊಳ್ಳುತ್ತನೇ ಇರಲಿಲ್ಲ. ಕಾನೂನಿಂದ ಹಲವಾರು ಬದಲಾವಣೆಗಳು ಆಗೋದಕ್ಕೆ ಸಾಧ್ಯತೆಗಳಿವೆ ಅಂತ ಹೇಳಿದ್ರು. ಇದನ್ನೂ ಓದಿ: ಶಬರಿಮಲೆ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಜಯಮಾಲಾ
ಬಲತ್ಕಾರವಾಗಿ ತಪ್ಪು ಕೆಲಸ ಮಾಡಿದ್ರೆ ಯಾರೂ ಒಪ್ಪಲ್ಲ. ಆದ್ರೆ ಇಲ್ಲಿ ಅವರು ಕಾನೂನಿನಲ್ಲಿ ಅವಕಾಶ ಸಿಕ್ಕಿದ್ದರಿಂದ ಹೋಗಿದ್ದಾರೆ. ಇದು ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ದೇವರನ್ನು ನೋಡಿದ ಬಳಿಕ ಏನಾದ್ರೂ ಬದಲಾವಣೆ ಆಯಿತೇ ಅಥವಾ ದೇವರಿಗೆ ತೊಂದರೆ ಏನಾದ್ರೂ ಆಗಿದ್ಯಾ ಅಂತ ಅವರು ಇದೇ ವೇಳೆ ಪ್ರಶ್ನಿಸಿದ್ರು.