ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಮಕ್ಕಳ ಬೃಹತ್ ಮಾರಾಟ ಜಾಲದ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಚರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸುದ್ದಿಯನ್ನು ಬಿತ್ತರಿಸಿದ ಪಬ್ಲಿಕ್ ಟಿವಿಗೆ ಧನ್ಯವಾದಗಳು. ನಾನು ಪಬ್ಲಿಕ್ ಟಿವಿಯನ್ನು ಗೌರವಿಸುತ್ತೇನೆ. ಹೆಣ್ಣು ಮಕ್ಕಳನ್ನು ರಕ್ಷಿಸುವ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಲ್ಲಿರುವ ಮಾಹಿತಿಯನ್ನು ನಮಗೆ ಕೊಡಿ. ನಾನು ಕೂಡಲೇ ಈ ವಿಚಾರವನ್ನು ಕಮಿಷನರ್, ಗೃಹ ಸಚಿವರ ಗಮನಕ್ಕೆ ತರುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿ ಅತ್ಯಂತ ಪ್ರಿಯಾವಾದ ಚಾನೆಲ್ ಎಂದು ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಬೆಂಗಳೂರಿನಿಂದ ದುಬೈಗೆ ಹೆಣ್ಣು ಮಕ್ಕಳ ಮಾರಾಟವಾಗುತ್ತಿದೆ. ಲಕ್ಷ ಲಕ್ಷ ಸಂಬಳ, ಫಾರಿನ್ ಆಸೆ ತೋರಿಸಿ ಅಂದ ಚೆಂದದ ಹುಡುಗಿಯರನ್ನು ದುಬೈಗೆ ಕಳುಹಿಸಲಾಗುತ್ತಿದೆ. ಈ ಬೃಹತ್ ಹೆಣ್ಣುಮಕ್ಕಳ ಸಾಗಾಟ ಜಾಲವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿತ್ತು. ಇದೇ ವಿಚಾರವಾಗಿ ಡೆಡ್ಲಿ ಗ್ಯಾಂಗ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸೀರಿಯಲ್ ನಟಿಯೊಬ್ಬರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದರು. ನನ್ನನ್ನು ಉದ್ಯೋಗಕ್ಕಾಗಿ ಫಾರಿನ್ ಗೆ ಕರೆದುಕೊಂಡು ಹೋಗುವ ಬಗ್ಗೆ ಭೇಟಿ ಮಾಡುವುದಕ್ಕೆ ಹೇಳಿದ್ದಾರೆ. ಬೆಂಗಳೂರಿನ ನವರಂಗ್ ಬಳಿ ಬರುವುದಕ್ಕೆ ಹೇಳಿದ್ದಾರೆ. ನನಗೆ ಯಾಕೋ ಇದು ಫೇಕ್ ಎಂದು ಎನ್ನಿಸುತ್ತಿದೆ. ಹೀಗಾಗಿ ನೀವು ನಮ್ಮ ಜೊತೆ ಬನ್ನಿ ಸಾರ್ ಎಂದು ಅವರು ಪಬ್ಲಿಕ್ ಟಿವಿ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಅಂದ-ಚಂದದ ಹೆಣ್ಮಕ್ಕಳೇ ಟಾರ್ಗೆಟ್ – ಬೆಂಗ್ಳೂರಿನಿಂದ ದುಬೈಗೆ ಸಪ್ಲೈ
Advertisement
Advertisement
ಕೂಡಲೇ ಪಬ್ಲಿಕ್ ಟಿವಿ ತಂಡ, ನಟಿಯನ್ನು ನವರಂಗ್ ಸಿಗ್ನಲ್ ಬಳಿ ಭೇಟಿ ಮಾಡಿ, ಯಾವ ಕಾರಣಕ್ಕೆ ದುಬೈಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕೆಲಸವೇನು? ಸಂಬಳವೆಷ್ಟು.? ಅವರು ಹೇಗೆ ಪರಿಚಯ ಎಂದು ವಿಚಾರಿಸಿದೆ. ಅಷ್ಟರೊಳಗೆ ಕಿರುತೆರೆ ನಟಿಗೆ ಫಾರಿನ್ ಆಸೆ ತೋರಿಸಿದ ಖದೀಮರು ಕಾಲ್ ಮಾಡಿ, ಸ್ಥಳ ಬದಲಾವಣೆ ಮಾಡಿದ್ದೇವೆ. ರಾಜಾಜಿನಗರದ ರಾಮಮಂದಿರ ಗ್ರೌಂಡ್ ಕಡೆ ಬರೋದಕ್ಕೆ ಹೇಳಿದ್ದಾರೆ. ನಂತರ ಮತ್ತೆ ಕಾಲ್ ಮಾಡಿ, ರಾಜಾಜಿನಗರ ಮೆಟ್ರೋ ಸ್ಟೇಷನ್ ಕಡೆ ಬರೋದಕ್ಕೆ ಹೇಳಿದ್ದರು. ಈ ಬಗ್ಗೆ ನಮ್ಮ ತಂಡ, ಸುಬ್ರಹ್ಮಣ್ಯ ನಗರ ಪೊಲೀಸರಿಗೆ ಮಾಹಿತಿ ನೀಡಿ ಹುಡುಗಿಯನ್ನು ಪಿಕ್ ಮಾಡೋಕೆ ರಾಜಾಜಿನಗರದ ಮೆಟ್ರೋ ಸ್ಟೇಷನ್ ಗೆ ಬರುವಾಗ ಲಾಕ್ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿತ್ತು.
https://www.youtube.com/watch?v=KR-okhIp_PM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv