ಉಡುಪಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಕುರಿತಾದ ವಿಚಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ಉಡಾಫೆಯ ಉತ್ತರ ನೀಡಿದ್ದಾರೆ.
ರೈತರ ಆತ್ಮಹತ್ಯೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ರಾಜ್ಯದಲ್ಲಿ ಎಷ್ಟು ಪರ್ಸಂಟೇಜ್? ಎಷ್ಟು ಜನ ರೈತರು ಹೋದರು? ಎಂದು ಮಾಧ್ಯಮಗಳನ್ನೇ ಮರು ಪ್ರಶ್ನೆ ಮಾಡಿದರು. ಇದಲ್ಲದೇ ರೈತರದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಆಯ್ತೋ ಗೊತ್ತಿಲ್ಲ? ಒಂದೆರಡು ಆತ್ಮಹತ್ಯೆಯಾದಾಗ ಅದರ ಸಮೀಕ್ಷೆ ನಡೆಯಬೇಕು ಎನ್ನುವ ಮೂಲಕ ಉಡಾಫೆಯ ಉತ್ತರವನ್ನು ನೀಡಿದ್ದಾರೆ.
ರೈತರಿಗೆ ಶಕ್ತಿಮೀರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಹಾಯ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಸಹನೆಯಿಂದ ಇರುವಂತೆ ಬೇಡಿಕೊಂಡಿದ್ದಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ರಾಜ್ಯದ ಎಲ್ಲಾ ರೈತರು ಸಹನೆಯಿಂದ ಇರಬೇಕು ಎಂದು ಇದೇ ವೇಳೆ ಜಯಮಾಲಾ ಮನವಿಯನ್ನು ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv