ಬೆಳಗಾವಿ: ನಗರ ನೀರು ಶುದ್ಧೀಕರಣ ಯೋಜನೆಗೆ ರೈತರು ವಿರೋಧ ವ್ಯಕ್ತಿಪಡಿಸಿ ಕುರ್ಚಿ ಮುರಿದು ಗಲಾಟೆ ವಿಚಾರಕ್ಕೆ ಸಂಬಂಧಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ.
ಯೋಜನೆಗೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಹಿಂದೆಯೇ ಯೋಜನೆಗೆ ಬೇಕಾದ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆದಿದ್ದು, ಕಾನೂನು ಪ್ರಕ್ರಿಯೆ ಸಂರ್ಪೂಣವಾಗಿ ಆಗಿದೆ. ಆದ್ದರಿಂದ ಈಗ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಯಾವುದೇ ಪ್ರಯೋಜನ ಆಗೋದಿಲ್ಲ. ಸದ್ಯ ರೈತರಿಗೆ ನಷ್ಟ ಆಗದಂತೆ ಮಾತ್ರ ಕ್ರಮಕೈಗೊಳ್ಳಲು ಸಾಧ್ಯ. ಈ ಜವಾಬ್ದಾರಿಯನ್ನ ತಾವೇ ನಿರ್ವಹಿಸುತ್ತೇವೆ ಎಂದರು.
Advertisement
Advertisement
ಈಗಾಗಲೇ ನಾನು ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿದ್ದೇನೆ. 2 ವರ್ಷಗಳ ಹಿಂದೆಯೇ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಬೆಳಗಾವಿ ನಗರಕ್ಕೆ ಈ ಯೋಜನೆ ಅನಿವಾರ್ಯ ಆಗಿದೆ. ರೈತರಿಗೆ ನಷ್ಟ ಆಗದಂತೆ ಈ ಯೋಜನೆಯನ್ನು ಜಾರಿ ಮಾಡಿ, ವಿಶೇಷ ಪ್ರಕರಣದ ಅಡಿಯಲ್ಲಿ ರೈತರಿಗೆ 30 ಲಕ್ಷ ರೂ. ಕೊಡಿಸುವ ಬಗ್ಗೆ ಪ್ರಸ್ತಾವನೆ ಇದೆ. ಈಗಾಗಲೇ ಸರ್ಕಾರದ ಹಣ ಬಿಡುಗಡೆಯಾಗಿ ಮತ್ತೆ ವಾಪಸ್ ಹೋಗಿದ್ದು, 2ನೇ ಬಾರಿಗೆ ಹಣ ವಾಪಸ್ ಹೋದರೆ ಮತ್ತೆ ರೈತರಿಗೆ ಪರಿಹಾರ ನೀಡುವುದು ಕಷ್ಟಸಾಧ್ಯವಾಗಲಿದೆ. ಇದನ್ನ ಸ್ಥಳೀಯ ಶಾಸಕರು ಆರ್ಥೈಸಿಕೊಳ್ಳಬೇಕು ಎಂದರು.
Advertisement
ಜಿಲ್ಲಾಧಿಕಾರಿಗಳು ಬದಲಾವಣೆ ಆದರೆ ರೈತರಿಗೆ ನ್ಯಾಯ ನೀಡುತ್ತೇನೆ ಎಂಬ ಹೆಬ್ಬಾಳ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಳೆ ಜಿಲ್ಲಾಧಿಕಾರಿಗಳಿದ್ರು, ಯಾವ ಡಿಸಿ ಬಂದರೂ ಏನು ಮಾಡಲು ಆಗಲ್ಲ. ಈ ವಿಚಾರದಲ್ಲಿ ಡಿಸಿ ಹೆಲ್ಪ್ ಲೆಸ್. ಜಿಲ್ಲಾಧಿಕಾರಿಗಳು ಯಾರೇ ಇರಲಿ, ಯೋಜನೆಗೆ ಜಮೀನು ಕೊಡಿಸುವುದು ಅವರ ಜವಾಬ್ದಾರಿ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ ಎಂದರು.
Advertisement
ಬೆಳಗಾವಿ ಉಸ್ತುವಾರಿ ಸಚಿವನಾಗಿ ಯೋಜನೆ ಬಗ್ಗೆ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೆ ಇಲ್ಲ. ರೈತರಿಗೆ ಸುಳ್ಳು ಭರವಸೆ ನೀಡಲು ಆಗುವುದಿಲ್ಲ, ಇದನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅನ್ಯಾಯ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕೇ ವಿನಃ ಪರ್ಯಾಯ ಮಾರ್ಗವಿಲ್ಲ. ಶಾಸಕರು ಸರ್ಕಾರದ ಒಂದು ಭಾಗ, ರೈತರಿಗೆ ತಿಳಿ ಹೇಳುವುದು ಅವರ ಕರ್ತವ್ಯ. ಯೋಜನೆಯ ಬಗ್ಗೆ ಇಬ್ಬರ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ತಿಳಿಸಿದರು.
ಕೊಳಚೆ ನೀರು ಶುದ್ಧೀಕರಣ ಯೋಜನೆಗೆ ವಿರೋಧ ವ್ಯಕ್ತಡಿಸಿ ನಿನ್ನೆಯಷ್ಟೇ ಆ ಭಾಗದ ರೈತರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಅಧಿಕಾರಿಗಳಿಗೆ ತಂದಿದ್ದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು.
https://www.youtube.com/watch?v=0YMqp89UWas