ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪೊಲೀಸ್ ವರ್ಗಾವಣೆಯಲ್ಲಿ ಪ್ರಭಾವಿ ಸಚಿವರ ಹಸ್ತಕ್ಷೇಪ ಶುರುವಾಗಿದೆ.
ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಸಚಿವರು ತಮಗೆ ಬೇಕಾದ ಜಾಗಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಸಚಿವ ಟಿಬಿ ಜಯಚಂದ್ರ ಸ್ವಕ್ಷೇತ್ರಕ್ಕೆ ಒಬ್ಬರು, ಬೇರೊಂದು ಠಾಣೆಗೆ ಮತ್ತೊಬ್ಬರಂತೆ ಪಿಐ ಎಂ.ಎನ್.ನಾಗರಾಜು, ಹೆಚ್.ವಿ.ಸುದರ್ಶನ್‍ರನ್ನು ವರ್ಗಾಯಿಸಿದ್ದಾರೆ.
Advertisement
Advertisement
ಸಚಿವ ಎಂ.ಕೃಷ್ಣಪ್ಪ ಬನಶಂಕರಿ ಠಾಣೆಗೆ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿದ್ರೆ, ಇತ್ತ ಸಚಿವ ಕಾಗೋಡು ತಿಮ್ಮಪ್ಪ ಡಿವೈಎಸ್‍ಪಿಯನ್ನು ತಮ್ಮ ಜಿಲ್ಲೆಗೆ ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ. ಇನ್ನು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕೆಜಿಎಫ್‍ನಿಂದ ಮೈಸೂರಿಗೆ ಅಧಿಕಾರಿಯನ್ನ ಕರೆಸಿಕೊಂಡಿದ್ದಾರೆ.
Advertisement
ಸಚಿವರಾದ ಎಂಬಿ ಪಾಟೀಲ್, ರಮೇಶ್ ಜಾರಕಿಹೊಳಿ 3 ತಿಂಗಳಲ್ಲೇ ಮೂವರು ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸಂಬಂಧ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
Advertisement