ಬೆಂಗಳೂರು: ರಾಜ್ಯದ ಜಾತಿ ಜನಗಣತಿ (Caste Census) ವರದಿ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಬೇಕು ಅಂತ ಮೇ 9ರ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡೋದಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ತಿಳಿಸಿದರು.
ಕೇಂದ್ರ ಸರ್ಕಾರದಿಂದ ಜಾತಿ ಜನಗಣತಿ ಮಾಡೋ ಘೋಷಣೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರದಿಂದ ಈಗಾಗಲೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ. ಈಗ ಕೇಂದ್ರ ಸರ್ಕಾರ (Central Government) ಜಾತಿಗಣತಿ ಮಾಡೋ ಘೋಷಣೆ ಮಾಡಿದೆ. ಕೇಂದ್ರದವರು ಜಾತಿಗಣತಿ ಜೊತೆಗೆ ಸಂಪೂರ್ಣ ಜನಗಣತಿ ಮಾಡುತ್ತಾರೆ ಎಂದು ವಿವರಿಸಿದ್ರು. ಇದನ್ನೂ ಓದಿ: ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ಬದ್ಧ: ಸಿದ್ದರಾಮಯ್ಯ
ನಮ್ಮ ಜಾತಿ ಜನಗಣತಿ ಬಗ್ಗೆ ಮೇ 9ಕ್ಕೆ ಕ್ಯಾಬಿನೆಟ್ ಸಭೆ ಇದೆ. ಸಭೆಯಲ್ಲಿ ಏನು ಮಾಡಬೇಕು ಅಂತ ನಿರ್ಧಾರ ತೆಗೆದುಕೊಳ್ತೀವಿ ಕ್ಯಾಬಿನೆಟ್‌ನಲ್ಲಿ ವರದಿ ಬಗ್ಗೆ ಸಂಪೂರ್ಣ ಚರ್ಚೆ ಮಾಡ್ತೀವಿ. ಕ್ಯಾಬಿನೆಟ್ ಬಳಿಕ ನಿರ್ಧಾರ ಏನು ಅಂತ ಗೊತ್ತಾಗುತ್ತದೆ ಅಂತ ಹೇಳಿದರು. ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್‌ಗೆ ಬಸವಣ್ಣನವರ ಹೆಸರು ಹೇಳುವ ಯೋಗ್ಯತೆ ಇಲ್ಲ – ಮಾವಳ್ಳಿ ಶಂಕರ್