ಬೆಂಗಳೂರು: ಜೆಡಿಎಸ್ ಕೇಳಿರುವಷ್ಟು ಲೋಕಸಭಾ ಕ್ಷೇತ್ರಗಳು ಸಿಗದೇ ಹೋದರೆ ಮುಂದೆ ನೋಡೋಣ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.
ಕಾಂಗ್ರೆಸ್‍ನೊಂದಿಗೆ ಲೋಕಸಭಾ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಜೆಡಿಎಸ್ ಶಾಸಕರು, ಮುಖಂಡರು ಒನ್ ಥರ್ಡ್ ಅಂದ್ರೆ 10 ರಿಂದ 12 ಸೀಟುಗಳನ್ನು ಕೇಳುತ್ತಿದ್ದಾರೆ. ಈ ವಿಚಾರವಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡುತ್ತಿದೆ. ಜೆಡಿಎಸ್ ಕೇಳಿರುವಷ್ಟು ಸೀಟು ಸಿಗದೇ ಹೋದರೆ ಮುಂದೆ ನೋಡೋಣ ಎಂದು ಹೇಳಿದರು.
Advertisement
ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷದ ಒಟ್ಟು 7 ಶಾಸಕರಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ನಾವ್ಯಾಕೆ ಲೋಕಸಭಾ ಟಿಕೆಟ್ ಬಿಟ್ಟುಕೊಡಬೇಕು ಎಂದು ತಿಳಿಸಿದರು.
Advertisement
Advertisement
ಕಾಂಗ್ರೆಸ್‍ನಿಂದ ಸುಮಲತಾ ಸ್ಪರ್ಧಿಸಿದ್ರೆ ನಿಮ್ಮ ಅಭ್ಯರ್ಥಿಯನ್ನು ಹಾಕಲ್ವಾ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಗುಡುಗಿದ ಸಚಿವರು, ನಾವ್ಯಾಕೆ ಅಭ್ಯರ್ಥಿಯನ್ನು ಹಿಂಪಡೆಯಬೇಕು? ಅವರೇನು ನಮ್ಮ ಪಕ್ಷದವರೇ ಎನ್ನುವ ಮೂಲಕ ಪರೋಕ್ಷವಾಗಿ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
Advertisement
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ರೆ ಎಂಬ ಪ್ರಶ್ನೆಗೆ ರೇವಣ್ಣ ಉತ್ತರಿಸಿದ ಸಚಿವರು, ಅವರು ಟಿಕೆಟ್ ಕೇಳ್ತಾ ಇರೋದು ಕಾಂಗ್ರೆಸ್‍ನಿಂದ ಎಂದು ಹಾರಿಕೆ ಉತ್ತರ ನೀಡಿ ದೋಸ್ತಿ ನಾಯಕರ ಮೇಲೆ ಸಂಪೂರ್ಣ ಜವಾಬ್ದಾರಿ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv