– 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪದ ಹಿನ್ನೆಲೆ ಸರ್ವೆ ಕಾರ್ಯ
ಬೆಂಗಳೂರು: ಕೇತಗಾನಹಳ್ಳಿ ಜಮೀನು ಸರ್ವೆ (Land survey) ಕೆಲಸ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಮಾಡ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ ಅಂತ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
Advertisement
ಈಗ ಎಲ್ಲಿಂದ ಉದ್ಬವ ಆದ್ರು ದೂರುದಾರರು?
ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇತಗಾನಹಳ್ಳಿ ಜಮೀನು ನಾನು 40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದು. 40 ವರ್ಷಗಳ ಹಿಂದೆ ಹತ್ತಾರು ಬಾರಿ ಸರ್ವೆ ಮಾಡಿಕೊಂಡಿದ್ದಾರೆ. ಹತ್ತಾರು ಬಾರಿ ಎಲ್ಲಾ ರೀತಿ ತನಿಖೆಗಳು ನಡೆದಿವೆ. ತನಿಖೆ ಮಾಡೋಕೆ ನಾನು ಮುಕ್ತವಾಗಿ ಇದ್ದೇನೆ. ನಿನ್ನೆ ಕೆಲವು ಕಾಂಗ್ರೆಸ್ ಪುಡಾರಿಗಳು ಕರೆದುಕೊಂಡು ಬಂದು ರಿಯಾಕ್ಷನ್ ಕೊಡಿಸಿದ್ದಾರೆ ನೋಡಿದ್ದೇನೆ. 40 ವರ್ಷಗಳಿಂದ ನನ್ನ ಹತ್ರ ಯಾರು ಬಂದಿರಲಿಲ್ಲ. ಈಗ ಎಲ್ಲಿಂದ ಉದ್ಬವ ಆದ್ರು ದೂರುದಾರರು ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ
Advertisement
Advertisement
1986-87 ರಲ್ಲಿ ಸಿಎಂ ಲಿಂಗಪ್ಪ, ರಾಮಚಂದ್ರಪ್ಪ ಅನ್ನೋರು ದೂರು ನೀಡಿದ್ರು. ಅಂದಿನ ಸಿಎಂ, ಪ್ರಧಾನಿ, ಗೃಹ ಸಚಿವರಿಗೆ ಅರ್ಜಿ ಹಾಕಿ ಕಾನೂನುಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಅಂತ ಅರ್ಜಿ ಹಾಕಿದ್ರು. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ಹಿರೇಮಠ ರಾಜ್ಯದ ಸಂಪತ್ತು ಉಳಿಸೋರು ಅವರು ದೂರು ಕೊಟ್ಟಿದ್ದಾರೆ. ನನಗೆ ಇಲ್ಲಿವರೆಗೂ ಹೈಕೋರ್ಟ್ ನಿಂದ ಯಾವುದೇ ನೊಟೀಸ್ ಕೊಟ್ಟಿಲ್ಲ. ಮೊನ್ನೆ ಯಾವುದೇ ನೊಟೀಸ್ ಕೊಡದೇ ಸರ್ವೆಗೆ ಮುಂದಾಗಿದ್ರು. ನಾನು ಡಿಸಿ ಅವರಿಗೆ ಹೇಳಿದೆ ನೀವು ಸರ್ವೆ ಮಾಡೋದಾದ್ರೆ ನೊಟೀಸ್ ಕೊಟ್ಟು ಮಾಡಿ ಅಂತ. ಅಮೇಲೆ 3 ದಿನಗಳ ಹಿಂದೆ ಡೇಟ್ ಹಾಕಿ ಸರ್ವೆ ಮಾಡೋಕೆ ಮುಂದಾದ್ರು. ನಾನು ಸರ್ವೆ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ಇಂಟರ್ನ್ಯಾಷನಲ್ ಸರ್ವೆ ಅವರನ್ನ ಕರೆದುಕೊಂಡು ಸರ್ವೆ ಮಾಡಿಸಲಿ. ನಾನು ಖರೀದಿ ಮಾಡಿರೋ ಭೂಮಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಈ ರಾಜ್ಯದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ ಚರಿತ್ರೆ ಇದೆ. ಯಾವ ರೀತಿ ಸಂವಿಧಾನದ ಸಂಸ್ಥೆಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಯಾವ ಸರ್ಕಾರಿ ರೀತಿ ಸರ್ಕಾರಿ ಭೂಮಿ ಲಪಟಾಯಿಸಿದ್ದಾರೆ ಅಂತ ಈ ಮಹಾನುಭಾವರ ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ಆದರೆ ಇಂದಿನ ವ್ಯವಸ್ಥೆಗಳಲ್ಲಿ ತಾರ್ಕಿಕ ಅಂತ್ಯ ಕಾಣೋಕೆ ಸಾಧ್ಯವಿಲ್ಲ ಅಂತ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
Advertisement
ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಇದರಲ್ಲಿ ಸಂಶಯವೇ ಇಲ್ಲ. ಎಷ್ಟು ತನಿಖೆ ಮಾಡ್ತೀರಾ? ಎಷ್ಟು ಬಾರಿ ನನ್ನ ವಿರುದ್ದ ತನಿಖೆ ಮಾಡ್ತೀರಾ? 2023 ಮಾರ್ಚ್ ನಲ್ಲಿ ಲೋಕಾಯುಕ್ತಗೆ ವರದಿ ಕೊಟ್ಟಿದ್ದಾರೆ. ಪದೇ ಪದೇ ಮಾಧ್ಯಮಗಳು ಕುಮಾರಸ್ವಾಮಿ ಮತ್ತು ಸಂಬಂಧಿಕರು ಅಂತ ಹೇಳ್ತೀರಾ. ಇದು ಡಿಸಿ ತಮ್ಮಣ್ಣ ಮತ್ತು ಮಾದೇಗೌಡರು ನಡುವೆ ಆಗಿದ್ದು. ಮಾದೇಗೌಡರು ದೂರು ಕೊಟ್ಡಿದ್ದರು. ಅದರ ಮೇಲೆ ಲೋಕಾಯುಕ್ತ ತನಿಖೆ ಸೂಚಿಸಿದ್ರು. ಅವರ ನಡುವೆ ವಿವಾದ ಇರೋದು ಅವರಿಬ್ಬರ ನಡುವೆ. ನನ್ನ ಹೆಸರು ಯಾಕೆ ಬಂತುಗೊತ್ತಿಲ್ಲ ಎಂದರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ – ಎರಡನೇ ದಿನವೂ ಮುಂದುವರಿದ ಸರ್ವೇ ಕಾರ್ಯ
ಸಿದ್ದರಾಮಯ್ಯ ತರಹ ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ
ನಿನ್ನೆ ಸಂಪೂರ್ಣವಾಗಿ ನನ್ನ ಜಮೀನು ತನಿಖೆ ಆಗಿದೆ. ಏನಿದೆ ವರದಿ ಕೊಡಲಿ. ನನಗೇನು ಗಾಬರಿ ಇಲ್ಲ. 40 ವರ್ಷಗಳ ಹಿಂದೆ ಖರೀದಿ ಮಾಡಿರೋ ಜಮೀನಿನ ಬಗ್ಗೆ ಇಷ್ಟೆಲ್ಲಾ ಮಾಡ್ತಿದ್ದಾರೆ. ಸಿದ್ದರಾಮಯ್ಯ ಏನೇನು ಮೀಟಿಂಗ್ ಮಾಡಿದ್ದಾರೆ ನನಗೆ ಗೊತ್ತಿದೆ. ಯಾರ ಯಾರನ್ನು ಕರೆಸಿಕೊಂಡು ಮೀಟಿಂಗ್ ಮಾಡಿದ್ದಾರೆ ಗೊತ್ತಿದೆ ನನಗೆ, 5 ಜನರ SIT ಟೀಂ ಮಾಡಿದ್ದಾರೆ. ಪೊಲೀಸ್ ಇಲಾಖೆಯ SIT ಟೀಂ ಆಯ್ತು. ಈಗ IAS ಅಧಿಕಾರಿಗಳ SIT ಟೀಂ ಸಿದ್ದರಾಮಯ್ಯ ರಚನೆ ಮಾಡಿದ್ದಾರೆ. ನಾನು ಓಪನ್ ಆಗಿ ಇದ್ದೇನೆ. ಸಿದ್ದರಾಮಯ್ಯ ತರಹ ನಾನು ಸರ್ಕಾರಿ ಭೂಮಿಗಳನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ಪಡೆದಿಲ್ಲ. ಅವರಿಗೆ ಅಧಿಕಾರ ಇದೆ, ಏನ್ ಬೇಕಾದ್ರು ಮಾಡ್ತಾರೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಮೇಲೆ 2012 ರಿಂದ ಮಹಾನುಭಾವರು ತನಿಖೆ ಮಾಡ್ತಾನೇ ಇದ್ದಾರೆ. ಬಿಜೆಪಿ ಅವಧಿಯಲ್ಲಿ ಅವರ ವಿರುದ್ದ ಹೋರಾಟ ಮಾಡಿದ್ದಕ್ಕೆ 3-4 ಕೇಸ್ ಹಾಕಿದ್ರು. 12-13 ವರ್ಷಗಳಿಂದ ಯಾವುದೇ ತನಿಖೆ ಸಂಸ್ಥೆಗಳು, SIT ಗಳು ಸತ್ಯಾಂಶ ಹೊರಗೆ ಇಡಲು ಆಗಲಿಲ್ಲ. ಡ್ರಾಮಾಗಳನ್ನ ಆಡಿಕೊಂಡು ಬರ್ತಿದ್ದಾರೆ. ಇದೊಂದು ರಾಜ್ಯನಾ? ಇದೆಲ್ಲದ್ದಕ್ಕೂ ಕಾಲವೇ ಉತ್ತರ ಕೊಡುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್