ಬೆಂಗಳೂರು: ಈ ವಿಧಾನಸಭಾ ಚುನಾವಣೆಗಾಗಿ ಎಲ್ಲ ನಾಯಕರು ತಮ್ಮ ಪಕ್ಷಗಳಿಂದ ಟಿಕೆಟ್ ಪಡೆಯಲು ಮುಂದಾಗಿದ್ದರೆ, ಕೆಲ ಹಿರಿಯ ಸಚಿವರು ಮಾತ್ರ ತಮ್ಮ ಜೊತೆ ಪುತ್ರರಿಗೂ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಈ ಬಾರಿ ಸಚಿವರ ಪುತ್ರರಿಗೆ ಟಿಕೆಟ್ ಇಲ್ಲ ಎಂಬ ಸ್ಪಷ್ಟ ಆದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರನಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಒತ್ತಡಕ್ಕೆ ಮಣಿದಿರುವ ಹೈಕಮಾಂಡ್ ಸಹ ಯತೀಂದ್ರನಿಗೆ ಟಿಕೆಟ್ ನೀಡುವ ಭರವಸೆ ನೀಡಿದೆ ಎಂಬ ಮಾಹಿತಿಗಳು ಲಭಿಸಿವೆ. ಸಿಎಂ ಪುತ್ರನಿಗೆ ಮಾತ್ರ ಟಿಕೆಟ್ ನೀಡಿದ್ದು, ಸಹಜವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಮುನಿಸಿಗೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಮಹದೇವಪ್ಪಗೆ ಬಿಗ್ ಶಾಕ್ ನೀಡಿದ ‘ಕೈ’ಕಮಾಂಡ್
Advertisement
Advertisement
ರಾಜಕೀಯದಲ್ಲಿ ಕುಚುಕು ಗೆಳೆಯರು ಅಂತ ಕರೆಸಿಕೊಳ್ಳುವ ಸಿಎಂ ಮತ್ತು ಹೆಚ್.ಸಿ.ಮಹದೇವಪ್ಪ ಕಳೆದ 10 ದಿನಗಳಿಂದ ಒಬ್ಬರಿಗೊಬ್ರು ಮಾತನಾಡಿಲ್ಲವಂತೆ. ಸಿಎಂ ಕಾಲ್ ಮಾಡಿದ್ರೂ, ಸಚಿವ ಮಹದೇವಪ್ಪ ಮಾತ್ರ ಉತ್ತರ ನೀಡಿಲ್ಲವಂತೆ. ನೀವು ಮಾತ್ರ ಅಪ್ಪ-ಮಕ್ಕಳು ಚುನಾವಣೆಗೆ ನಿಲ್ಲಬಹುದು? ನಾವು ನಿಲ್ಲಬಾರದಾ…? ನಿಮ್ಮ ಮಗನಿಗೆ ನೀವು ರಾಜಕೀಯ ದಾರಿ ಮಾಡಿಕೊಡಬಹುದು. ಆದ್ರೆ ನನ್ನ ಮಗನಿಗೆ ನಾನು ದಾರಿ ಮಾಡಿಕೊಡಬಾರದಾ? ಎಂಬ ಪ್ರಶ್ನೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಹೆಚ್.ಸಿ.ಮಹದೇವಪ್ಪ ಪುತ್ರನ ವಿಚಾರಣೆ
Advertisement
ಟಿ.ನರಸೀಪುರ ಕ್ಷೇತ್ರದಲ್ಲಿ ನೀವು ಯಾರಾದ್ರೂ ಒಬ್ಬರು ಚುನಾವಣೆಗೆ ನಿಲ್ಲಿ. ಈಗ ಇಬ್ಬರಿಗೂ ಕ್ಷೇತ್ರ ಹುಡುಕಿಕೊಡೋದು ಕಷ್ಟವಾಗಲಿದೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದ್ದು, ಸಿಎಂ ವಿರುದ್ಧ ರಾಂಗ್ ಆಗಿದ್ದಾರೆ ಎನ್ನಲಾಗಿದೆ.