ಬೆಂಗಳೂರು: ಸಿಎಂ ಕುಮಾರಸ್ವಾಮಿ ಮೇಲೆ ಆರೋಪ ಮಾಡಿದ್ದ ಶಾಸಕ ಕುಮಾರ್ ಬಂಗಾರಪ್ಪಗೆ ಸಚಿವ ರೇವಣ್ಣ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ಮಾಡುವುದಕ್ಕೆ ಆಗುತ್ತಾ? ಇಷ್ಟು ಮಾತನಾಡುವ ಯಡಿಯೂರಪ್ಪ ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಕಾರ್ಯಕರ್ತರನ್ನ ನಿಲ್ಲಿಸಬಹುದಿತ್ತು ಅಲ್ವಾ. ಬಿಎಸ್‍ವೈ ಶ್ರೀರಾಮುಲು ಕಾರ್ಯಕ್ರಕರ್ತರನ್ನ ಯಾಕೆ ನಿಲ್ಲಿಸಲಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಈಗ ಎಲ್ಲಾ ಚುನಾವಣಾ ರಾಜಕೀಯ ಮಾಡುತ್ತಾರೆ. ಅವರು ಹಾಕುವ ಬಾಂಬ್ ಗಳು ನಮಗೆ ಗೊತ್ತಿಲ್ವಾ ಅಂತ ಬಿಎಸ್‍ವೈ ಮತ್ತು ಕುಮಾರ್ ಬಂಗಾರಪ್ಪಗೆ ಟಾಂಗ್ ನೀಡಿದರು.
ಉಪ ಚುನಾವಣೆಯ ಐದು ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಂಡ್ಯ, ಶಿವಮೊಗ್ಗ, ಬಳ್ಳಾರಿಯಲ್ಲಿ ಒಳ್ಳೆಯ ವಾತಾವರಣ ಇದೆ. ನೂರಕ್ಕೆ ನೂರರಷ್ಟು ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮಂಡ್ಯದಲ್ಲಿ ಯಾವುದೇ ವಿರೋಧಗಳು ಇಲ್ಲ. ಎಚ್‍ಡಿಕೆ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಇದೆ. ಹೀಗಾಗಿ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ಋಣಮುಕ್ತ ಪತ್ರ:
ನವೆಂಬರ್ 20ರ ಒಳಗೆ ರೈತರಿಗೆ ಋಣಮುಕ್ತ ಪತ್ರ ನೀಡುತ್ತೇವೆ. ಸಹಕಾರಿ ಬ್ಯಾಂಕ್ ಗಳು ಸಹಕಾರ ನೀಡುತ್ತೇವೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಿ ಋಣಮುಕ್ತ ಪತ್ರ ನೀಡುತ್ತೀವಿ ಎಂದು ಸ್ಪಷ್ಟಪಡಿಸಿದ ಅವರು ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲಮನ್ನಾಗೆ ಸ್ಪಂದಿಸದೇ ಇದ್ದರೆ ಏನ್ ಕ್ರಮ ತೆಗೆದುಕೊಳ್ಳಬೇಕು ನಮಗೆ ಗೊತ್ತಿದೆ. ಬೇಕೆಂದರೆ ರೈತರ ಅಕೌಂಟ್ ಗೆ ಹಣ ಹಾಕುತ್ತೇವೆ. ರೈತರ ಖಾತೆಗೆ ದುಡ್ಡು ಕಳಿಸಿ ಮನ್ನಾ ಮಾಡುತ್ತೇವೆ ಎಂದು ಹೇಳಿದರು.
ರಾಷ್ಟ್ರೀಯ ಬ್ಯಾಂಕ್ ಗಳು ಸಹಕಾರ ಕೊಡದಿದ್ದಕ್ಕೆ ಬಿಜೆಪಿ ಕಾರಣ. ಯಡಿಯೂರಪ್ಪನವರೇ ಸಾಲ ಮನ್ನಾಗೆ ಒಪ್ಪಬೇಡಿ ಅಂತ ಹೇಳುತ್ತಿದ್ದಾರೆ ಅಂತ ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv