ಹುಬ್ಬಳ್ಳಿ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಪ್ರವಾಸಿ ಮಂದಿರ ಉದ್ಘಾಟನೆಗೆ ಹೋಗಿ ವಾಸ್ತು ಪ್ರಕಾರ ಮೀಟಿಂಗ್ ಹಾಲ್ ಟೇಬಲ್‍ನ ದಿಕ್ಕನ್ನೇ ಬದಲಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಗಾಗಿ ಸಚಿವ ರೇವಣ್ಣ ಅವರು ಆಗಮಿಸಿದ್ದರು. ಈ ವೇಳೆ ಮೀಟಿಂಗ್ ಹಾಲ್ ನ ಟೇಬಲ್ ನ ದಿಕ್ಕು ಬದಲಿಸುವಂತೆ ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Advertisement
Advertisement
ರೇವಣ್ಣ ಬೆಳಿಗ್ಗೆ ಐಬಿ ಉದ್ಘಾಟನೆ ಮಾಡಿ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದರು. ಅಲ್ಲಿ ವಾಸ್ತು ಸರಿ ಬಾರದ ಕಾರಣ ಮೀಟಿಂಗ್ ಹಾಲಿನ ಟೇಬಲ್ ಗಳನ್ನು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಹಾಕಲು ಸೂಚಿಸಿದ್ದಾರೆ. ಹೀಗಾಗಿ ಸಚಿವ ರೇವಣ್ಣ ಅವರ ಸೂಚನೆ ಹಿನ್ನಲೆಯಲ್ಲಿ ಸಿಬ್ಬಂದಿ ಮತ್ತೆ ಕೆಲಸ ಶುರು ಮಾಡಿದ್ದಾರೆ. ಮೀಟಿಂಗ್ ಹಾಲಿನಲ್ಲಿ ಹಾಕಲಾಗಿದ್ದ ಉದ್ದ ಟೇಬಲ್ ಗಳನ್ನು ಈಗ ಬದಲಿಸುವ ಕಾರ್ಯ ನಡೆಯುತ್ತಿದೆ.
Advertisement
ಕೆಲ ದಿನಗಳ ಹಿಂದೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆಶಿಪ್) ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಲು ರೇವಣ್ಣ ಅವರು ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರೂ ಕಾರಿನಿಂದ ಇಳಿದಿರಲಿಲ್ಲ. ರಾಹುಕಾಲ ಮುಗಿದ ಬಳಿಕವೇ ರೇವಣ್ಣ ವಾಹನದಿಂದ ಇಳಿದಿದ್ದಾರೆ. ರೇವಣ್ಣ ಅವರು ಕಾರ್ಯಕ್ರಮಕ್ಕೆ 9.40ಕ್ಕೆ ಆಗಮಿಸಿದ್ದರೂ ರಾಹುಕಾಲ ಮುಗಿದ ಬಳಿಕ 9.54ಕ್ಕೆ ಕಾರಿನಿಂದ ಇಳಿದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv