ಬೆಂಗಳೂರು: ದಲಿತರು (Dalit CM) ಸಿಎಂ ಆಗಬೇಕು ಎಂದು ಮಾತಾನಾಡಿದ್ದ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ಇಂದು ಯೂಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಅಂಬೇಡ್ಕರ್ ಹೇಳಿದ್ದಾರೆ. ಮೀಸಲಾತಿಯಿಂದ ಸಂತೋಷವಾಗಿಲ್ಲ. ನನ್ನ ಜನರು ಅಧಿಕಾರದಲ್ಲಿ ಇರಬೇಕು. ಪಾಲಿಸಿ ಮೇಕಿಂಗ್ ಚೇರ್‌ನಲ್ಲಿ ಇರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕು ಅಂತ ಹೇಳಿದ್ದು. ಮತ ಹಾಕ್ತಿರಾ, ಆಯಾ ಜಾತಿಯವರು ನಾಯಕನ ಹಿಂದೆ ಹೋಗ್ತಾರೆ. ನೀವು ಮತಹಾಕಿ ಸುಮ್ಮನಾಗಿ ಬಿಡ್ತೀರಾ. ನಾವು ಮತ ಹಾಕಿ ಬೇರೆಯವರ ಮುಂದೆ ಕೈಜೊಡಿಸುತ್ತೇವೆ. ನಮ್ಮಿಂದ ಮತ ಪಡೆದವರು ನಮ್ಮ ಮೇಲೆ ಆಡಳಿತ ಮಾಡ್ತಾರೆ. ಅದಕ್ಕಾಗಿ ಒಗ್ಗಾಟಾಗಿ ಅಂತ ಹೇಳಿದ್ದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಂಸ್ಕರಣೆ ಮಾಡಿದ ನೀರು ಮರುಬಳಕೆಗೆ ಶೀಘ್ರವೇ ಆದೇಶ: ಈಶ್ವರ್ ಖಂಡ್ರೆ
ಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ? ಬಹುಜನರು ಒಂದಾಗಿದ್ದಕ್ಕೆ ಕಾಂಗ್ರೆಸ್ ಗೆಲ್ತಾ ಇರೋದು. ಬೇಕಾದಷ್ಟು ದಲಿತರಿಗೆ ಕಾಂಗ್ರೆಸ್ ಸಿಎಂ ಮಾಡಿದೆ. ಬೇರೆ ಪಾರ್ಟಿ ಕೂಡ ಸಿಎಂ ಮಾಡಬೇಕು. ಈ ಸಮುದಾಯಗಳ ಕುರಿತು ಮಾತನಾಡಿದ್ದೇನೆ. ಪಾರ್ಟಿ ಬಗ್ಗೆ ಹೇಳಿಕೆ ನೀಡಿಲ್ಲ. ವಿಷಯ ಕಾಂಪ್ಲಿಕೇಟ್ ಮಾಡಬೇಡಿ ನೀವು ಎಂದು ದಲಿತ ಸಿಎಂ ಬೇಡಿಕೆ ಇಟ್ಟು ಉಲ್ಟಾ ಹೊಡೆದಿದ್ದಾರೆ.
ದಲಿತರಲ್ಲಿ ಬಹಳಷ್ಟು ಜನರು ಪ್ರತಿಭಾವಂತರಿದ್ದಾರೆ. ದಲಿತ ಅನ್ನುವ ಕಾರಣಕ್ಕೆ ಅವಕಾಶ ಸಿಕ್ಕಿಲ್ಲ. ದಲಿತ ನಾಯಕತ್ವದ ಹಿಂದೆ ನಿಲ್ಲಬೇಕು ಅಂತ ಹೇಳಿದ್ದೇನೆ. ಇದು ಅಂಬೇಡ್ಕರ್ ಮಾತು. ನೀವೆಲ್ಲ ಸೇರಿ ನಮಗೆ ಸಿಎಂ ಅವಕಾಶ ಕೊಡಿಸಿ ಎಂದಿದ್ದಾರೆ. ಇದನ್ನೂ ಓದಿ: ದೇಶದ್ರೋಹಿಗಳಿಗೂ, ಕೈ ನಾಯಕರಿಗೂ ಅಪ್ಪುಗೆಯ ನಂಟಿನ ಕಾರಣ FSL ವರದಿ ವಿಳಂಬ: ಸಿ.ಟಿ.ರವಿ
ನಮ್ಮ ಪರವಾಗಿ ಯಾರೂ ಮಾತನಾಡುವುದಿಲ್ಲ. ನಿಮ್ಮ ಧ್ವನಿ ಕೂಡ ಮುಖ್ಯ. ನಮ್ಮ ಪರವಾಗಿ ಮಾತನಾಡಿ. ನಿಮ್ಮ ಐಡಿಯಾಗಳನ್ನು ನಮ್ಮ ಮಾತಿನಲ್ಲಿ ಹೇಳಿಸಬೇಡಿ. ಕಾಂಗ್ರೆಸ್ ಮಾತ್ರ ನಾಲ್ಕಾರು ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿರೋದು. ಬೇರೆ ಯಾರು ಮಾಡಿದ್ದಾರೆ ಅಂತ ತೋರಿಸಿ ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾನು ನಿಲ್ಲಲ್ಲ. ದಲಿತರಿಗೆ ಹೆಚ್ಚಿನ ಲೋಕಸಭೆ ಟಿಕೆಟ್ ನೀಡುವುದಕ್ಕೆ ಪಾರ್ಟಿ ಈ ಬಗ್ಗೆ ನಿರ್ಧಾರ ಮಾಡಬೇಕು. ಮೀಸಲು ಕ್ಷೇತ್ರ ಬಿಟ್ಟು ಬೇರೆ ಕಡೆ ಅಭ್ಯರ್ಥಿಗಳು ಇದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿರ್ಧಾರ ಮಾಡಬೇಕು. ಜನರಲ್ ಕ್ಷೇತ್ರದಲ್ಲಿ ಕೂಡ ಗೆಲ್ಲುವ ಸಾಮರ್ಥ್ಯ ನಮ್ಮ ನಾಯಕರಿಗಿದೆ. ಆದರೆ ಪಕ್ಷ ಅವಕಾಶ ಕೋಡಬೇಕು. ಸದ್ಯಕ್ಕೆ ಹೆಚ್ಚಿನ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ