ಚಾಮರಾಜನಗರ: ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡ್ತಾರೆಂಬ ವಿಜಯೇಂದ್ರ ಹೇಳಿಕೆಗೆ ಸಚಿವ ಹೆಚ್.ಸಿ.ಮಹದೇವಪ್ಪ (H.C.Mahadevappa) ತಿರುಗೇಟು ನೀಡಿದ್ದಾರೆ.
ಚಾಮರಾಜನಗರದಲ್ಲಿ (Chamarajanagara) ಮಾತನಾಡಿದ ಅವರು, ಜನರು 136 ಸೀಟು ಗೆಲ್ಲಿಸಿರೋದು ವಿಜಯೇಂದ್ರ ರಾಜೀನಾಮೆ ಕೇಳಿದ ತಕ್ಷಣ ಕೊಡೋದಕ್ಕಾ? ವಿಜಯೇಂದ್ರ, ಯಡಿಯೂರಪ್ಪ, ಅಶೋಕ್, ಹೆಚ್ಡಿಕೆ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ ಇವರೆಲ್ಲಾ ಏನೇನ್ ಮಾಡಿದ್ದಾರೆ ಗೊತ್ತಾ? ಇವರ ಮೇಲೆ ಸಾಕಷ್ಟು ಕೇಸ್‌ಗಳಿವೆ. ಮೊದಲು ಅವರ ಮನೆ ಶುದ್ಧಿ ಮಾಡಿಕೊಳ್ಳಲಿ. ಸಿಎಂ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ. ಶಾಸಕರು, ಮಂತ್ರಿಗಳು, ಹೈಕಮಾಂಡ್ ಎಲ್ಲಾ ಅವರ ಜೊತೆ ಇದ್ದಾರೆ ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರ ದುರುಪಯೋಗ ಆರೋಪ; ಪಾಂಡವಪುರ ಎಸಿ ಅಮಾನತು
Advertisement
Advertisement
ಮುಡಾ ಹಗರಣದಲ್ಲಿ ವೈಟ್ನರ್ ಬಳಸಿ ತಿದ್ದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದು ನಿರಾಧಾರ ವಿಷಯ. ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ವಿಪಕ್ಷದವರು ರಾಜಕೀಯಕರಣಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ವಿಪಕ್ಷದವರು ಆ ಕಡೆ ಗಮನಹರಿಸದೇ ವೃತ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಮುಡಾ ವಿಚಾರವಾಗಿ ಈಗಾಗ್ಲೇ ನ್ಯಾಯಾಂಗ ತನಿಖೆಗೆ ಆದೇಶ ಆಗಿದೆ. ನ್ಯಾಯಾಲಯದ ಮುಂದೆಯೂ ಕೂಡ ಪ್ರಕರಣವಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಹಣಕಾಸು ವ್ಯವಹಾರವೂ ಇಲ್ಲ, ಸ್ವಜನಪಕ್ಷಪಾತವೂ ಇಲ್ಲ. ಆದರೂ ಅಂತೆ ಕಂತೆಗಳ ಸೃಷ್ಟಿ ಮಾಡಿದ್ದಾರೆ. ಪ್ರಾಮಾಣಿಕತೆ, ಬದ್ಧತೆ ಇರುವ ಒಬ್ಬ ಹಿಂದುಳಿದ ವರ್ಗದ ನಾಯಕನ ವ್ಯಕ್ತಿತ್ವ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್ – ಸಿಎಂ ರಾಜೀನಾಮೆ ಪ್ರಮೇಯವೆ ಇಲ್ಲ ಮಂಕಾಳ ವೈದ್ಯ
Advertisement
ಸಿಎಂ ಸಾರ್ವಜನಿಕ ಜೀವನಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಯುತ್ತಿದ್ದು, ಕೋಮುವಾದಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಆಗಬಾರದು ಎಂಬುದು ಅವರ ಆಸೆ ಜೆಡಿಎಸ್, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಎಲ್ಲಾ ಸೇರಿ ರಾಜಕೀಯ ಪಿತೂರಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.