ಬೆಳಗಾವಿ: ಎಂಎಲ್‍ಸಿ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಮಿತ್ರರು ತಿಣುಕಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಜನರಿಗೆ ಮುಖ ತೋರಿಸಲು ಕಾಂಗ್ರೆಸ್ ಮಿತ್ರರಿಗೆ ಆಗುವುದಿಲ್ಲವೆಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
Advertisement
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಸಾರ್ವತ್ರಿಕ ಚುನಾವಣೆಯಲ್ಲ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸುವ ಚುನಾವಣೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 5150 ಗೆದ್ದಿದ್ದಾರೆ, ನಮ್ಮ ಅಭ್ಯರ್ಥಿ ಗೆಲ್ಲಿಸಲು ಕುಸ್ತಿ ಹಿಡಿಯುವ ಅವಶ್ಯಕತೆ ಇಲ್ಲ. ಕುಸ್ತಿ ಹಿಡಿಯದೆ ಕುಸ್ತಿ ಗೆದ್ದು ತೋರಿಸುತ್ತೇವೆ. 24 ಗಂಟೆ ನಮ್ಮ ಸರ್ಕಾರ ಕೋವಿಡ್ ನಿರ್ವಹಣೆಗೆ ಶ್ರಮಿಸುತ್ತಿದೆ ಎಂದರು. ಇದನ್ನೂ ಓದಿ: ಕಾರ್ಯಕ್ರದಲ್ಲಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
Advertisement
Advertisement
ನಮ್ಮ ಕೆಲಸವನ್ನು ಕಾಂಗ್ರೆಸ್ ಕಣ್ಣು ತೆರೆದು ನೋಡಬೇಕು. ಸುಮ್ಮನೆ ಮೋದಿ, ಬೊಮ್ಮಾಯಿ, ಬಿಎಸ್ ವೈ ಟೀಕಿಸಿದ್ರೆ ಏನಾಯಿತ್ತು? ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏಕೆ ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ತಿಣುಕಾಡುತ್ತಿದ್ದಾರೆ. ಡಿಸೆಂಬರ್ 14ರ ಮಧ್ಯಾಹ್ನ ಅವರೆಲ್ಲ ನಿರಾಶೆಗೋಳ್ಳುತ್ತಾರೆ. ರಾಜ್ಯದಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಾರೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಕೂಡ ಗೆಲ್ಲುತ್ತಾರೆ ಎಂದು ತಿಳಿಸಿದರು.