ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಇಂದು ದಿಢೀರ್ ಭೇಟಿ ನೀಡಿ ಇಲಾಖೆ ಪರಿಶೀಲನೆ ನಡೆಸಿದರು. ಆಡಳಿತ ಕಚೇರಿ ಮತ್ತು ದಾಸ್ತಾನು ಗೋಡಾನ್‍ಗೆ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶಗೊಂಡರು. ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ನಾನು ಸಹಿಸೊಲ್ಲ ಅಂತ ಎಚ್ಚರಿಕೆ ಕೊಟ್ಟರು.
Advertisement
ಮೊದಲು ಕನ್ನಿಂಗ್ ಹ್ಯಾಮ್ ರಸ್ತೆಯ ಆಡಳಿತ ಕಚೇರಿಗೆ ಭೇಟಿ ನೀಡಿದರು. ಆಡಳಿತ ಕಚೇರಿಯಲ್ಲಿ ಶೇ.50 ರಷ್ಟು ಅಧಿಕಾರಿಗಳು, ಸಿಬ್ಬಂದಿ ಕೆಲಸ ಪ್ರಾರಂಭ ಆಗಿ ಒಂದು ಗಂಟೆ ಕಳೆದರೂ ಕಚೇರಿಗೆ ಬಂದಿರಲಿಲ್ಲ. ಖುದ್ದು ಎಲ್ಲರ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದ ಅವರು, ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹಾಜರಾತಿ ಪುಸ್ತಕದಲ್ಲಿ ಸಹಿ ಇರಲಿಲ್ಲ. ಇದರಿಂದ ಕೋಪಗೊಂಡ ಸಚಿವರು ಹಾಜರಾತಿ ಪುಸ್ತಕ ಇರೋದು ಯಾಕೆ. ಸಹಿ ಹಾಕಬೇಕಲ್ವಾ ಅಂತ ಕ್ಲಾಸ್ ತೆಗೆದುಕೊಂಡರು. ಇದು ಗೋಪಾಲಯ್ಯ ಛತ್ರ ಅಲ್ಲ. ಇಷ್ಟ ಬಂದಾಗ ಬರೋಕೆ, ಹೋಗೋಕೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಆಡಳಿತ ಕಚೇರಿಯ ಶೌಚಾಲಯ ನೋಡಿ ಆಕ್ರೋಶಗೊಂಡ ಸಚಿವರು, ಇದೇನು ಶೌಚಾಲಯನಾ? ನಿಮ್ಮ ಮನೆ ಆದರೆ ಹೀಗೆ ಇಟ್ಟುಕೊಳ್ತಿದ್ರಾ ಅಂತ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು.
Advertisement
ಆಡಳಿತ ಕಚೇರಿ ಬಳಿಕ ಯಶವಂತಪುರದ ದಾಸ್ತಾನು ಗೋಡಾನ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಡಾನ್ ನಿರ್ವಹಣೆ ನೋಡಿ ಕಿಡಿಕಾರಿದ ಸಚಿವರು, ಹೀಗಾ ನಿರ್ವಹಣೆ ಮಾಡೋದು ಅಂತ ಆಕ್ರೋಶ ಹೊರ ಹಾಕಿದ್ರು. ನೆಲದಲ್ಲಿ ಬಿದ್ದಿದ್ದ ಅಕ್ಕಿ ಕಂಡು ನಿಮ್ಮ ಮನೆಯಲ್ಲೂ ಹೀಗೆ ಮಾಡ್ತೀರಾ ಅಂತ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಹಳೆ ಗೋಧಾಮಿನಲ್ಲಿ ಉಳಿದಿದ್ದ ಗೋಧಿ ನೋಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಇಲಾಖೆ ಭೇಟಿ ಬಳಿಕ ಮಾತನಾಡಿದ ಸಚಿವ ಗೋಪಾಲಯ್ಯ, ನಾನು ಹೊಸದಾಗಿ ಇಲಾಖೆ ಜವಾಬ್ದಾರಿ ಹೊತ್ತಿದ್ದೇನೆ. ಸ್ವಲ್ಪ ಸಮಯ ಕೊಡಿ ಗೋಪಾಲಯ್ಯ ಏನು ಅಂತ ತೋರಿಸ್ತೀನಿ ಅಂತ ಭರವಸೆ ಕೊಟ್ಟರು. ದಾಸ್ತಾನು ಸಂಗ್ರಹಕ್ಕೆ ಯಶವಂತಪುರದಲ್ಲಿ 15 ಅಂತಸ್ತಿನ ಗೋಡಾನ್ ನಿರ್ಮಾಣ ಪ್ರಸ್ತಾಪ ಮುಂದಿದೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಪಡಿತರಕ್ಕೆ 7 ರಿಂದ 5 ಕೆ.ಜಿಗೆ ಅಕ್ಕಿ ಕಡಿತ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ 7 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಮುಂದಿನ ತಿಂಗಳು 7 ಕೆ.ಜಿಯೇ ನೀಡಲಾಗುತ್ತದೆ. ಹೆಚ್ಚಳ ಮಾಡೋದು ಅಥವಾ ಕಡಿಮೆ ಮಾಡೋದು ಬಜೆಟ್ ನಲ್ಲಿ ನಿರ್ಧಾರ ಆಗುತ್ತೆ ಅಂತ ತಿಳಿಸಿದರು.