ಮೈಸೂರು: ಕಾಲೇಜು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಪ್ರೀತಿ ಪ್ರೇಮದ ವ್ಯಾಖ್ಯಾನ ತಿಳಿಸಿದ್ದಾರೆ.
ಪ್ರೀತಿ ಎಂದರೆ ಪರಸ್ಪರ ಅರಿತು ಬಾಳುವುದು. ಪ್ರೀತಿಯ ಹೆಸರಿನಲ್ಲಿ ಮನೆ ಬಿಟ್ಟು ಓಡಿ ಹೋಗುವುದು ಅಲ್ಲ. ಪರಸ್ಪರ ಆಕರ್ಷಣೆಯೇ ಪ್ರೀತಿಯಲ್ಲ. ಕೆಲ ವರ್ಷಗಳ ಹಿಂದೆ ವರನಿಗೆ ವರದಕ್ಷಿಣೆ ನೀಡುವ ಪರಿ ಪಾಠವಿತ್ತು. ಆದರೆ ಈಗ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸಚಿವ ಜಿ.ಟಿ ದೇವೇಗೌಡ ವಿಶ್ಲೇಷಿಸಿದ್ದಾರೆ.
Advertisement
ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆಯಾಗುವದಕ್ಕೆ ಜಾತಿಗಳು ಅಡ್ಡಿಯಿಲ್ಲ. ಆದರೆ ಆ ಜಾತಿಗಳು ನಮ್ಮ ಬದುಕಿಗೆ ಅಡ್ಡಿ ಬರುವುದಿಲ್ಲ. ಆದರೆ ಉತ್ತಮ ಗುಣಗಳು, ಉತ್ತಮ ನಡವಳಿಕೆ ಇರುವ ಜೀವನ ಸಂಗಾತಿಯನ್ನು ನೀವು ಹುಡುಕಿಕೊಳ್ಳಬೇಕು. ವಿದ್ಯಾವಂತರಾಗಿ ನೀವೇ ನಿಮ್ಮ ಸಂಗಾತಿಯ ಆಯ್ಕೆಯಲ್ಲಿ ತಪ್ಪು ದಾರಿ ತುಳಿಯಬಾರದು. ಬಹಳಷ್ಟು ಜನ ಪ್ರೀತಿಸಿ ಅದ್ಧೂರಿಯಿಂದ ಮದುವೆಯಾಗುತ್ತಾರೆ. ಆದರೆ ಮದುವೆಯಾಗಿ ಕೆಲವು ದಿನದಲ್ಲೇ ಡಿವೋರ್ಸ್ ನೀಡುತ್ತಾರೆ. ಈಗಿನ ವಕೀಲರು ಹಾಗೂ ಪೊಲೀಸರಿಗೆ ಡಿವೋರ್ಸ್ ಕೇಸ್‍ಗಳೇ ಹೆಚ್ಚಾಗುತ್ತಿದೆ. ಸಂಗಾತಿಯ ಆಯ್ಕೆಯಲ್ಲಿ ನಾವು ಒಂದು ಹೆಜ್ಜೆ ತಪ್ಪು ಇಟ್ಟರೇ, ನೀವು ವಿದ್ಯಾವಂತರು, ಪದವಿ ಪಡೆದುಕೊಂಡಿದ್ದರು ಏನು ಲಾಭ. ಹಾಗಾಗಿ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು ಎಂದು ಸಲಹೆ ನೀಡಿದರು.
Advertisement
ಕೆಲವರಿಗೆ ಪ್ರೀತಿ ಎಂಬುದೇ ಗೊತ್ತಿಲ್ಲ. ಪ್ರೀತಿ ಎಂದರೆ ಕೆಲವರು ಯುವತಿಯರನ್ನು ಓಡಿಸಿಕೊಂಡು ಹೋಗ್ತಾರೆ. ಪ್ರೀತಿ ಎಂದರೆ ನಿಮಗೆ ಚೆನ್ನಾಗಿ ಗೊತ್ತಿರಬೇಕು. ನಿಮ್ಮ ಜೊತೆ ಹಗಲಿರಲಿ, ರಾತ್ರಿಯಿರಲಿ ಅವರು ಯಾವ ರೀತಿ ಪ್ರೀತಿಯಿಂದ, ಮನೋಭಾವದಿಂದ ಕಾಣುತ್ತಾರೋ ಆ ಪ್ರೀತಿ ಶಾಶ್ವತ. ಪೋಷಕರು ನಿಮಗೆ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಾರೆ. ಪೋಷಕರಿಗೂ, ನಿಮ್ಮ ಗ್ರಾಮ, ಕಾಲೇಜಿಗೆ ಒಳ್ಳೆಯ ಹೆಸರು ಬರುವಂತೆ ಸಾಧನೆ ಮಾಡಬೇಕೆಂದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.