ಮೈಸೂರು: ಬಸವ ಜಯಂತಿ ಮೆರವಣಿಗೆಯಲ್ಲಿ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಈ ವೇಳೆ ಅಲ್ಲಿ ಬಾರಿಸಿದ ತಮಟೆ ತಾಳಕ್ಕೆ ಜಿ. ಟಿ ದೇವೇಗೌಡರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಜಿಟಿಡಿ ಅವರಿಗೆ ಪಾಲಿಕೆ ಸದಸ್ಯ ಬಿ.ವಿ ಮಂಜುನಾಥ್ ಕೂಡ ಸಾಥ್ ನೀಡಿದರು.
ಇಂದು ಮೈಸೂರಿನಲ್ಲಿ ಗಣ್ಯರು ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸುತ್ತೂರು ಶ್ರೀ, ಸಚಿವ ಜಿಟಿ ದೇವೇಗೌಡ, ಶಾಸಕ ಎಲ್. ನಾಗೇಂದ್ರ ಅವರು ಗನ್ ಹೌಸ್ ಬಳಿ ಇರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಕಾರ್ಯಕ್ರಮ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ವಿವಿಧ ವೀರಶೈವ ಸಂಘ ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.