– ಕಡ್ಡಾಯ ಅನುಮತಿ ಆದೇಶ RSS ದೃಷ್ಟಿಯಿಂದ ಮಾಡಿದ್ದಲ್ಲ ಎಂದ ಸಚಿವ
ಬೆಂಗಳೂರು: ಚಿತ್ತಾಪುರದಲ್ಲಿ (Chittapur) ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ ಒಟ್ಟಿಗೆ ಅನುಮತಿ ಕೇಳಿದ್ದಾರೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ಅದರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದರು.
ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಸರ್ಕಾರದ ಮಾರ್ಗಸೂಚಿ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಸಾರ್ವಜನಿಕ, ಸರ್ಕಾರಿ ಸ್ಥಳಗಳ ಬಳಕೆ ಅನುಮತಿ ಪಡೆಯುವ ಆದೇಶ ಆರ್‌ಎಸ್‌ಎಸ್‌ಗೆ ಮಾತ್ರ ಸೀಮಿತ ಅಲ್ಲ. ಈಗ ಹೊರಡಿಸಿರುವ ತುರ್ತು ಆದೇಶದಲ್ಲಿ ಕ್ಲಾರಿಟಿ ಇದೆ. ಅದರಲ್ಲಿ ಎಲ್ಲಾದರೂ ಆರ್‌ಎಸ್‌ಎಸ್ ಪದ ಬಳಕೆ ಆಗಿದೆಯಾ? ಸುಮ್ಮನೆ ಅನವಶ್ಯಕವಾಗಿ RSSಗೆ ಮಾಡಿದ್ದಾರೆ ಅಂತ ಹೇಳೋದು ಸರಿಯಲ್ಲ. ನಾವು ಆರ್‌ಎಸ್ಎಸ್ ಒಬ್ಬರಿಗೆ ಮಾಡಲಿಲ್ಲ. ನಾವು ಎಲ್ಲರಿಗೂ ಅನ್ವಯ ಆಗುವಂತೆ ಮಾಡಿದ್ದೇವೆ. ಸಂಘರ್ಷ ಆಗಬಾರದು ಶಾಂತಿಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ
ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾರಿಗೂ ಕೊಡಬಾರದು ಅಂತಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಈಗ ಸಮಸ್ಯೆ ಬಂತು ಆರ್‌ಎಸ್‌ಎಸ್ ದೃಷ್ಟಿಯಿಂದಲೇ ಈ ನಿರ್ಧಾರ ಬಂತು ಅಂತ ಇಟ್ಟುಕೊಳ್ಳೋಣ. ಆ ಸಮಸ್ಯೆ ಬಂದಾಗ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಆಗಲಿ ಅಂತ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರ್ತಾ ಇತ್ತು. ಅದಕ್ಕಾಗಿ ಅವರಿಗೆ ಬೆಂಗಾವಲು ಪಡೆ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ದರ್ಜೆ ಸಚಿವರು ಅವರಿಗೆ ರಕ್ಷಣೆ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು ಅಂತ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಬ್ರೇಕ್


