ಬೆಂಗಳೂರು: ರಾಜಣ್ಣ (K.N.Rajanna) ದೂರು ಕೊಡಬೇಕಲ್ಲವಾ? ದೂರು ಕೊಟ್ಟರೆ ತನಿಖೆ ಮಾಡ್ತೇವೆ. ನೀವು ಎಷ್ಟು ಬಾರಿ ತಿರುಗಿಸಿ ಮುರುಗಿಸಿ ಕೇಳಿದ್ರು ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರು ನೀಡದ ಬಗ್ಗೆ ನೀವು ರಾಜಣ್ಣರನ್ನ ಕೇಳಬೇಕು. ಅವರಿಗೆ ಯಾವಾಗ ಕೊಡಬೇಕು ಅನ್ನಿಸುತ್ತೆ ಕೊಡ್ತಾರೆ. ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ, ದೂರು ಕೊಡಲಿಲ್ಲ ಅಂದ್ರೆ ಅವರನ್ನೇ ಕೇಳಿ ಎಂದರು.
ನನ್ನ ಕೆಲಸ ತನಿಖೆ ಘೋಷಣೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ತನಿಖೆ ತೀರ್ಮಾನ ಮಾಡ್ತಾರೆ. ದೂರು ಬಂದರೆ ತನಿಖೆ ಮಾಡೋದು ಎಂದು ತಿಳಿಸಿದರು. ಇದೇ ವೇಳೆ, ರಾಜಣ್ಣ ಪುತ್ರ ರಾಜೇಂದ್ರ ಬೆದರಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.