ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಹೇಳಿದರು.
ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿಗೆ ತಿರುಗೇಟು ನೀಡಿದ ಪರಮೇಶ್ವರ್, ಕುಮಾರಸ್ವಾಮಿ ಅವರ ಬಗ್ಗೆ ಮಾತಾಡದೆ ಇರುವುದೇ ಒಳ್ಳೆಯದು. ಅವರು ಅಂತಹ ಮಾತುಗಳನ್ನ ಆಡ್ತಾರೆ. ಅವರನ್ನ ಹಾಗೇ ಬಿಟ್ಟು ಬಿಡೋದೆ ವಾಸಿ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಮರಗಳ್ಳತನ ಕೇಸ್; ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರು
Advertisement
Advertisement
ಸಂಸದ ಪ್ರತಾಪ್ ಸಿಂಹ ಸಹೋದರನ ಪ್ರಕರಣ ಕುರಿತು ಮಾತನಾಡಿ, ಕಾನೂನಿದೆ. ಕಾನೂನಾತ್ಮವಾಗಿ ಮರ ಕಡಿಯಬೇಕು. ಪರ್ಮಿಶನ್ ಇಲ್ಲದೇ ಮಾಡಿದ್ದಾರೆ. ಅದಕ್ಕೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಇದರಲ್ಲಿ ಸಿಎಂ ಹೆಸರು ತರುವುದು ಬೇಡ. ಅನಾವಶ್ಯಕವಾಗಿ ರಾಜಕೀಯ ಬಣ್ಣ ಕೊಡ್ತಿದ್ದಾರೆ ಎಂದು ಹೇಳಿದರು.
Advertisement
ಹೊಸ ವರ್ಷ ಆಚರಣೆಗೆ ಯಾವುದೇ ತೊಂದರೆ ಆಗದಂತೆ ಬೆಂಗಳೂರು ಹಾಗೂ ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ವಾರದ ಹಿಂದೆಯೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬಿಬಿಎಂಪಿ ಆಯುಕ್ತ, ಬೆಸ್ಕಾಂ ಸಿಇ, ಆರೋಗ್ಯ ಇಲಾಖೆ ನಿರ್ದೇಶಕರು, ಅಬಕಾರಿ ಆಯುಕ್ತರ ಜೊತೆ ಚರ್ಚೆ ಮಾಡಿದ್ದೇನೆ. ಅವರವರ ಜಬಾವ್ದಾರಿ ಏನಿದೆ ಅಂತಾ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಾಪ್ ಸಿಂಹರನ್ನು ಸಿಎಂ ಟಾರ್ಗೆಟ್ ಮಾಡಿದ್ದಾರೆ: ಭಗವಂತ ಖೂಬಾ
Advertisement
ಪ್ರತಿವರ್ಷ ಬೆಂಗಳೂರಿನಲ್ಲಿ ಸಾವಿರಾರು ಜನ ಸೇರ್ತಾರೆ. ಕೆಲವು ಸಂದರ್ಭದಲ್ಲಿ ಗಲಾಟೆ, ನೂಕಾಟ ಆಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಜನ ಸೇರ್ತಾರೆ. ಹೆಣ್ಣುಮಕ್ಕಳ ಮೇಲೆ ನೂಕಾಟ ಆಗಿದ್ದೂ ಇದೆ. ಹೀಗಾಗಿ ವಿಶೇಷ ಗಮನ ಕೊಡಬೇಕು ಅಂತಾ ಹೇಳಿದ್ದೇನೆ ಎಂದರು.
ಈ ಬಾರಿ ಸಂತೋಷದಿಂದ ಆಚರಣೆ ಆಗಲಿ. ಯಾವುದೇ ಅಹಿತಕರ ಘಟನೆ ಆಗಬಾರದು. ಕೋವಿಡ್ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಆತಂಕ ಪಡಬೇಕಾದ ಅಗತ್ಯ ಇಲ್ಲ. 60 ವರ್ಷ ಮೇಲ್ಪಟ್ಟವರು ಮಾಸ್ಕ್ ಹಾಕಿಕೊಳ್ಳಬೇಕು. ಅದನ್ನ ಅನೌನ್ಸ್ ಮಾಡ್ತಿದ್ದೇವೆ. ಹೆಚ್ಚಿನ ರೀತಿಯಲ್ಲೇ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲೆಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ್ದೀರಿ.. ಮರ್ಯಾದೆಯಿಂದ ವಾಪಸ್ ತೆಗೆದುಕೊಳ್ಳಿ: ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ