ಬೆಂಗಳೂರು: ಮೂರು ಡಿಸಿಎಂ ಸ್ಥಾನ ನೀಡಬೇಕು ಎಂಬ ಸಚಿವ ರಾಜಣ್ಣ ಮಾತನ್ನ ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಸಹ ಸಮರ್ಥಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ರಾಜಣ್ಣ ಕೇಳೋದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಸಿಎಂಗೂ ಹೈಕಮಾಂಡ್‌ಗೂ ಅವರೇ ತಿಳಿಸಬೇಕು. ಅವರ ವೈಯಕ್ತಿಕ ಅಭಿಪ್ರಾಯ, ಅವರ ಅನಿಸಿಕೆ ಬಗ್ಗೆ ಅವರೇ ಹೇಳಬೇಕು. ಡಿಸಿಎಂ ಮಾಡಬೇಕು ಎಂಬ ಅವರ ಉದ್ದೇಶ ಒಳ್ಳೆಯದೆ. ಲೋಕಸಭೆ ಚುನಾವಣೆ ಮುಂಚೆ ಸಮುದಾಯಗಳಿಗೆ ಡಿಸಿಎಂ ಮಾಡಬೇಕು ಅಂತ ರಾಜಣ್ಣ ಹೇಳಿದ್ದಾರೆ. ತೀರ್ಮಾನ ಮಾಡುವವರು ಬಿಡುವವರು ಎಐಸಿಸಿ ನಾಯಕರು. ಡಿಸಿಎಂ ಸ್ಥಾನ ಮಾಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿರುವುದು ಎಂದಿದ್ದಾರೆ. ಇದನ್ನೂ ಓದಿ: 42 ನಕಲಿ ಕಾಮಗಾರಿ ಬಿಲ್ – ED, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು
Advertisement
Advertisement
ಚೈತ್ರಾ ಕುಂದಾಪುರ ಪ್ರಕರಣ ಕುರಿತು ಮಾತನಾಡಿ, ನಿನ್ನೆ ಸ್ವಲ್ಪ ಡ್ರಾಮಾ ಎಲ್ಲ ನಡೆದಿತ್ತಲ್ಲ. ಇಲಾಖೆಯವರು ಹ್ಯಾಂಡಲ್ ಮಾಡ್ತಾ ಇದ್ದಾರೆ. ಸಂಪೂರ್ಣ ತನಿಖೆ ಆದ ಮೇಲೆ ಎಲ್ಲ ವಿಚಾರ ನಿಮಗೆ ತಿಳಿಸುತ್ತೇವೆ. ತನಿಖೆ ಎಲ್ಲ ಹೊರಬರಲಿ ಯಾರ ಯಾರದು ಲಿಂಕ್ ಇದೆ? ಅವರೇ ಹಣ ತೆಗೆದುಕೊಂಡಿದ್ರಾ? ಬೇರೆಯವರಿಗೆ ಕೊಟ್ಟಿದ್ರಾ? ಎಲ್ಲ ತನಿಖೆ ಬಳಿಕ ಹೊರ ಬರುತ್ತದೆ. ಸ್ವಾಮೀಜಿಯನ್ನು ಹುಡುಕುತ್ತಿದ್ದಾರೆ, ಇನ್ನೂ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
Advertisement
ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ, ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ತಿಳಿದೂ ತಿಳಿದೂ ಹೋರಾಟ ಮಾಡ್ತೀವಿ ಅನ್ನೋದು ರಾಜಕೀಯ. ಕಾವೇರಿ ನೀರನ್ನು ಯಾರ ಅದೇಶದ ಮೇಲೆ ಬಿಡುತ್ತಿದ್ದಾರೆ ಎನ್ನುವುದು ಯಡಿಯೂರಪ್ಪಗೆ ಚೆನ್ನಾಗಿ ಗೊತ್ತಿರಬೇಕಲ್ಲ. ಎಲ್ಲ ಗೊತ್ತಿದ್ದೂ ಯಡಿಯೂರಪ್ಪ ಮಾಜಿ ಸಿಎಂ ಆಗಿ, ಅಷ್ಟು ಸೀನಿಯರ್ ಆಗಿ ಹೋರಾಟ ಮಾಡ್ತೀವಿ ಎನ್ನುವುದು ಸರಿಯಾ? ಒಳಗಡೆ ನಾವು ರಾಜಕೀಯ ಮಾಡಲ್ಲ ಅಂತ ಹೇಳ್ತಾರೆ. ಹೊರಗಡೆ ಬಂದು ಹೋರಾಟ ಮಾಡ್ತೀವಿ ಅಂತಾರೆ ಬಿಜೆಪಿಯವರು. ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ
Advertisement
ನಮ್ಮಲ್ಲಿ ಮರಳು ದಂಧೆ ನಡೆಯುತ್ತಿಲ್ಲ. ಮರಳು ದಂಧೆಗೆ ವಿರುದ್ಧವಾಗಿರುವವನು ನಾನು. ಒಂದೇ ಒಂದು ಲಾರಿಯೂ ತಾಲೂಕಿಂದ ಹೊರಗಡೆ ತೆಗೆದುಕೊಂಡು ಹೋಗುವುದಕ್ಕೆ ಬಿಡುವುದಿಲ್ಲ. ಯಾರಾದರು ಒಂದು ವೇಳೆ ಅಟ್ಯಾಕ್ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಹಿಂದೆ ಕಲಬುರಗಿಯಲ್ಲಿ ಆದ ವಿಚಾರಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಪೊಲೀಸ್ ರೆವೆನ್ಯು ಎಲ್ಲ ಇಲಾಖೆಯವರು ಸೇರಿ ಮರಳು ದಂಧೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
Web Stories