ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ವೈರಸ್ ನಿಂದಾಗಿ ಕೋಳಿ ತಿನ್ನುವವರ ಸಂಖ್ಯೆ ಕಡಿಮೆಯಾಗಿದ್ದು, ಈ ಮಧ್ಯೆ ಸಚಿವ ಕೆ.ಎಸ್.ಈಶ್ವರಪ್ಪ ಕೋಳಿ ಬೆಲೆ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೋಳಿಯಿಂದ ಕೊರೊನಾ ಬರುವುದಿಲ್ಲ ಎಂದು ಎಲ್ರೂ ಹೇಳುತ್ತಿದ್ದಾರೆ. ಆದರೆ ಕೋಳಿ ಬೆಲೆಯಲ್ಲಿ ವಿಪರೀತ ಇಳಿಕೆಯಾಗಿದೆ. ಅಲ್ಲದೆ ಕೋಳಿ ತಿನ್ನುವವರು ನಾವು, ನನಗೆ ಕೋಳಿ ಬೆಲೆ ಗೊತ್ತಿಲ್ಲ. ನಿಮಗೆ ಹೇಗೆ ಗೊತ್ತು ಎಂದು ಕೋಳಿ ತಿನ್ನದವರನ್ನು ಪ್ರಶ್ನಿಸಿದ್ದಾರೆ.
Advertisement
Advertisement
ಕೋಳಿಯಿಂದಾಗಿ ಕೊರೊನಾ ವೈರಸ್ ಬರುತ್ತೋ ಬಿಡುತ್ತೋ ನನಗೆ ಗೊತ್ತಿಲ್ಲ. ಆದರೆ ನಾನು ದಿನಾಲು ತಿನ್ನುತ್ತಿದ್ದೇನೆ, ಕಳೆದ ಮೂರು ದಿನಗಳಿಂದ ತಿನ್ನುತ್ತಿದ್ದೇನೆ. ಆದರೆ ಇವತ್ತು ಸಂಕಷ್ಟ ಚತುರ್ಥಿ ಇರುವುದರಿಂದ ತಿನ್ನುತ್ತಿಲ್ಲ ಎಂದು ನಗುತ್ತ ಉತ್ತರಿಸಿದ್ದಾರೆ.
Advertisement
ಕೊರೊನಾದಿಂದಾಗಿ ಕೋಳಿ ಮಾಂಸ ತಿನ್ನುವವರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಕ್ಕುಟೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ನಾನು ಮೂರು ದಿನದಿಂದಲೂ ತಿನ್ನುತ್ತಿದ್ದೇನೆ ಎಂದು ಹೇಳುವ ಮೂಲಕ ಕೋಳಿಯಿಂದ ಕೊರೊನಾ ಹರಡುವುದಿಲ್ಲ ಎಂಬದುನ್ನು ಹಾಸ್ಯವಾಗಿ ತಿಳಿಸಿದರು.