ಬೀದರ್: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Ekanath Shinde) ರಾಜ್ಯಕ್ಕೆ ಕಾಲಿಡಲಿ ನೋಡೋಣ ಎಂದು ಹೇಳುವ ಮೂಲಕ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಖಡಕ್ (Eshwar Khandre) ವಾರ್ನಿಂಗ್ ಕೊಟ್ಟಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಾರಾಷ್ಟ್ರದ ಮಾದರಿ ರಾಜ್ಯದಲ್ಲೂ ನಾಥ ಆಪರೇಷನ್ ಸಿಎಂ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸಂವಿಧಾನಿಕ ಸಿಎಂ ಸ್ಥಾನದಲ್ಲಿದ್ದುಕೊಂಡು ಈ ರೀತಿ ಹೇಳೋಕೆ ಶಿಂಧೆಗೆ ನಾಚಿಕೆಯಾಗಬೇಕು. ಬರೀ ರಾಜ್ಯದಲ್ಲಿ ಕಳವು ಮಾಡಬೇಕು ಅನ್ನೋದೇ ಅವರ ಉದ್ದೇಶ ಎಂದು ತೀರುಗೇಟು ನೀಡಿದರು.
ಆಪರೇಷನ್ ಕಮಲ ಮಾಡೋಣ ಅನ್ನೋದು ಒಂದು ಹಣ, ಆಸ್ತಿ ಕಸಿದುಕೊಳ್ಳುವ ಕೆಲಸ ಮಾಡೋಕೆ, ಇಂಥೋರಿಗೆ ಛೀಮಾರಿ ಹಾಕೋಣ. ಇಲ್ಲೇನು ಕಾಂಗ್ರೆಸ್ ನವರು ಗಿರಾಕಿಗಳು ಇದ್ದಾರಾ ಹೊತ್ತುಕೊಂಡು ಹೋಗೋಕೆ. ಅವರಿಗೆ ಇಲ್ಲಿ ಸುಮ್ಮನೆ ಬಿಡುತ್ತಾರಾ ಎಂದು ಶಿಂಧೆಗೆ ಖಂಡ್ರೆ ಟಾಂಗ್ ನೀಡಿದರು.
ಏಕನಾಥ್ ಶಿಂಧೆ ಹೇಳಿದ್ದೇನು..?: ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ (Maharastra) ಸತಾರಾದಲ್ಲಿ ಮಾತನಾಡಿದ್ದ ಶಿಂಧೆ, ಕರ್ನಾಟಕದಲ್ಲಿ ಸರ್ಕಾರ ಪತನಕ್ಕೆ ತೆರೆಮರೆಯಲ್ಲಿ ಸರ್ಕಸ್ ನಡೆಯುತ್ತಿದೆ ಎಂಬ ಸ್ಫೊಟಕ ಹೇಳಿಕೆಯೊಂದನ್ನು ನೀಡಿದ್ದರು. ನಾನು ಇತ್ತಿಚೇಗೆ ಕರ್ನಾಟಕದ (Karnataka) ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ’ ಆಪರೇಷನ್ ಮಾಡೋದಿದೆ’ ಅಂದಿದ್ದಾರೆ. ‘ನಾಥ ಆಪರೇಷನ್’ ಅಂದ್ರೆ ಏನು..? ಅಂತ ಕೇಳಿದೆ. ಆಗ ಅವರು, ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದರು. ಖಂಡಿತವಾಗಿಯೂ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಅಣತಾ ಇಂದು ಶಿಂಧೆ ಹೇಳುವ ಮೂಲಕ ಆಪರೇಷನ್ ಸುಳಿವು ಕೊಟ್ಟಿದ್ದರು. ಶಿಂಧೆ ಹೇಳಿಕೆ ರಾಜ್ಯ ರಾಜಕೀಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.