ಬೀದರ್: ಇರುವ ಅಕ್ಕಿಯನ್ನು ಇಲಿಗಳು ತಿನ್ನಲಿ ಎಂದು ಬಿಜೆಪಿಯವರು (BJP) ಗೋದಾಮುಗಳಲ್ಲಿ ಮುಚ್ಚಿ ಇಟ್ಟಿದ್ದಾರೆ. ಇದು ಬಿಜೆಪಿಯ ಅಕ್ಕಿ (Rice) ರಾಜಕಾರಣವಲ್ಲದೆ ಮತ್ತೇನು ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಬಿದರ್‍ನಲ್ಲಿ ಮಾತನಾಡಿದ ಅವರು, ನಾವು ಅಕ್ಕಿ ಕೊಡುತ್ತೇವೆ. ಆದರೆ ಬಿಜೆಪಿಗೆ ಯಾಕೆ ಹೊಟ್ಟೆ ಕಿಚ್ಚು, ಸೋತ ಹತಾಶಾ ಭಾವನೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ, ಅದರ ಬುದ್ಧಿ ಎರಡೂ ಹ್ಯಾಕ್: ಪ್ರಲ್ಹಾದ್ ಜೋಶಿ
ರಾಜ್ಯದಲ್ಲೇ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದು, ಈ ಅಕ್ಕಿಯನ್ನು ಏನು ಮಾಡುತ್ತಾರೆ?. ಅಕ್ಕಿ ಇದ್ದರೂ ನೀಡದೆ ನಮ್ಮ ಅನ್ನಭಾಗ್ಯಕ್ಕೆ ಬಿಜೆಪಿ ನಾಯಕರು ಅಡೆತಡೆ ಮಾಡುತ್ತಿದ್ದಾರೆ. ಮೂರು ತಿಂಗಳಿನಲ್ಲಿ ಓಪನ್ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಿ ಜನರಿಗೆ ಅಕ್ಕಿ ಕೊಡುತ್ತೇವೆ. ಎಲ್ಲಿವರೆಗೆ ಅಕ್ಕಿ ವ್ಯವಸ್ಥೆ ಆಗಲ್ವೋ ಅಲ್ಲಿವರೆಗೆ ನಾವು ಜನರಿಗೆ ಹಣ ನೀಡುತ್ತೇವೆ ಎಂದರು.
ಅಕ್ಕಿ ವಿಷಯದಲ್ಲಿ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಬಿಜೆಪಿ ಒಂದೇ ಬಂದು ಭರವಸೆಗಳನ್ನು ಈಡೇರಿಸಿಲ್ಲ. 15 ಲಕ್ಷ ಅಕೌಂಟಿಗೆ ಹಾಕಿದ್ರಾ..?, 2 ಕೋಟಿ ಉದ್ಯೋಗ ಕೋಟ್ರಾ..?, ಮನೆ ಇಲ್ಲದವರಿಗೆ ಸೂರು ಕೊಟ್ರಾ ಎಂದು ಖಂಡ್ರೆ ಬಿಜೆಪಿಯನ್ನು ಪ್ರಶ್ನಿಸಿದರು.
ಬಿಜೆಪಿ ನಾಯಕರು ಒಳ ಒಳಗೆ ಅವರೇ ಕಿತ್ತಾಟ, ಕಚ್ಚಾಟ ಮಾಡಿಕೊಳ್ಳುತ್ತಿದ್ದು, 100 ಬಣಗಳು ಇದೆಯಾ ಎಂದು ನೀವೇ ಹೇಳಬೇಕು ಎಂದು ಖಂಡ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]