ಬೆಂಗಳೂರು: ಕಾಂಗ್ರೆಸ್ ನಲ್ಲಿ ಬೆಳಗಾವಿ ಬ್ಯಾಟಲ್ ಆಯ್ತು, ಈಗ ಬಿಜೆಪಿಯಲ್ಲಿ ಬೆಂಗಳೂರು ಬ್ಯಾಟಲ್ ನಡೆಯುತ್ತಿದೆ. ಇಬ್ಬರು ನಾಯಕರ ನಡುವಿನ ಗುದ್ದಾಟದಿಂದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಹೊಸ ಸಂಕಟ ಎದುರಾಗಿದೆ.
ಶಾಸಕರು, ಸಂಸದರಿಗೆ ಗೊತ್ತಿಲ್ಲದೇ ನಾಯಕ ಆರ್ ಅಶೋಕ್ ಅವರು ಬಿಬಿಎಂಪಿ ಆಪರೇಷನ್ ಗೇಮ್ ಮಾಡ್ತಿದ್ದಾರಂತೆ. ಸಾಮ್ರಾಟ್ ಎಂದೇ ಕರೆಸಿಕೊಳ್ಳುವ ಅಶೋಕ್ ಮೇಲೆ ಡಿ.ವಿ.ಸದಾನಂದ ಗೌಡ ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಅಶೋಕ್ ವಿರುದ್ಧ ಕೇಂದ್ರ ನಾಯಕರು, ಆರ್‍ಎಸ್‍ಎಸ್ ನಾಯಕರಿಗೆ ದೂರು ನೀಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಬಿಬಿಎಂಪಿ ಚುನಾವಣೆಯಲ್ಲೂ ಆರ್.ಅಶೋಕ್ `ಆಪರೇಷನ್ ಕಮಲ’ ಅಂತಾ ಆರೋಪಿಸಿ ಇದೀಗ ಈ ದೂರು ನೀಡಲಾಗಿದೆ. ಹೀಗಾಗಿ ಬಿ.ಎಸ್.ಯಡಿಯೂರಪ್ಪ ಅವರು ಡಿವಿಎಸ್ ಪರ ನಿಲ್ತಾರೋ ಅಥವಾ ಅಶೋಕ್ ಪರ ನಿಲ್ತಾರೋ ಎಂಬ ಕುತೂಹಲ ಎದುರಾಗಿದೆ. ಒಟ್ಟಿನಲ್ಲಿ ಈ ವಿಚಾರ ಸಂಬಂಧ ಇಂದು ಆರ್.ಅಶೋಕ್ ಜೊತೆ ಬಿಎಸ್‍ವೈ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv