ಮಂಗಳೂರು: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಇಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಭೇಟಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿದ ಡಿವಿಎಸ್ ಶರತ್ ತಂದೆ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಗನ ಸಾವನ್ನು ನೆನೆದು ಡಿವಿಎಸ್ ಮುಂದೆ ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದ್ರು. ಡಿವಿಎಸ್‍ಗೆ ಶಾಸಕ ಸುನೀಲ್ ಕುಮಾರ್, ಎಂಎಲ್‍ಸಿ ಗಣೇಶ್ ಕಾರ್ಣಿಕ್ ಸಾಥ್ ನೀಡಿದ್ರು.
Advertisement
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್, ಶರತ್ ಒಬ್ಬ ಅಮಾಯಕ ಯುವಕ. ಒಂದು ಕಪ್ಪುಚುಕ್ಕೆ ಇಲ್ಲದವನ ಕೊಲೆಯಾಯ್ತು. ಇಂತಹ ನೂರು ಶರತ್ ಹುಟ್ಟಿ ಬರ್ತಾರೆ. ಆಡಳಿತ ಸೂತ್ರ ಹಿಡಿದವರೇ ಇದರ ಹಿಂದೆಯಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.
Advertisement
ಇದೇ ವೇಳೆ ಡಿವಿಎಸ್ ತುಪ್ಪ ಸುರಿಯುತ್ತಾರೆಂಬ ರಮಾನಾಥ ರೈ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯಾರು ಯಾರಿಗೆ ತುಪ್ಪ ಸುರಿಯುತ್ತಾರೆ ನೋಡೋಣ. ತುಪ್ಪ ಯಾರಿಗೆ ಸುರಿಯುತ್ತಾರೆ ಅಂತ ಗೊತ್ತಾಗುತ್ತದೆ ಎಂದು ರೈ ವಿರುದ್ಧ ಕಿಡಿಕಾರಿದ್ರು.
Advertisement
I will be visiting parents of RSS karyakartha Sri Sharath , at their village house in #Bantwal in a short while .
— Sadananda Gowda (@DVSadanandGowda) July 11, 2017
It was heart wrenching to meet the parents of Mr Sharath RSS karyakartha , Sharath who lost his life in a brutal attack by goons pic.twitter.com/sSvbM0XGHU
— Sadananda Gowda (@DVSadanandGowda) July 11, 2017