ಬಳ್ಳಾರಿ: ಬಿಜೆಪಿ ಅಭ್ಯರ್ಥಿಯಾಗಿರುವ ಜಾರಕಿಹೊಳಿ ಬೀಗರಾದ ದೇವೇಂದ್ರಪ್ಪ ಹಾಗೂ ಅವರ ಪುತ್ರ ಅಬಕಾರಿ ಆಯುಕ್ತ ಮಂಜುನಾಥರಿಗೆ ಸಚಿವ ಡಿ.ಕೆ ಶಿವಕುಮಾರ್ ನೇರವಾಗಿ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರ‌್ಯಾರೂ ಲಿಕ್ಕರ್ ಶಾಪ್ ಗಳ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದಾ ಎಂದು ನನಗೆ ಗೊತ್ತಿದೆ. ನಮ್ಮದೇನಿದ್ದರೂ ಅಭಿವೃದ್ಧಿ, ಹಫ್ತಾ ವಸೂಲಿ ರೋಲ್‍ಕಾಲ್ ಎಲ್ಲಾ ಬಂದ್. ಲಿಕ್ಕರ್ ಶಾಪಗಳ ಮಾಲೀಕರಿಗೆ ಹಣ ಕೊಡುವಂತೆ ಫೋನ್ ಬರುತ್ತಿರುವುದು ನನಗೆ ಗೊತ್ತಿದೆ. ಹಾಗೊಂದು ವೇಳೆ ಹಫ್ತಾ ವಸೂಲಿ ಮಾಡಿದರೆ ಸರಿಯಿರಲ್ಲ ಎಂದು ಡಿಕೆ ಶಿವಕುಮಾರ್ ಪರೋಕ್ಷವಾಗಿ ಜಾರಕಿಹೊಳಿ ಬೀಗರಾದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಪುತ್ರನಿಗೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ದೇವೇಂದ್ರಪ್ಪ ಬೇಕಾದರೆ ಲೋಡ್ ಗಟ್ಟಲೇ ತುಂಬಿಕೊಂಡು ಬರಲಿ. ನಾವೂ ಚುನಾವಣೆ ಮಾಡೋಣ, ದೇವೇಂದ್ರಪ್ಪ ಅನ್ನೋ ಮೀನು ಶ್ರೀರಾಮುಲು ಅವರ ಗಾಳಕ್ಕೆ ಬಿದ್ದಿದೆ. ಆದರೆ ನಾವೂ ಯಾರಿಂದಲೂ ಹಫ್ತಾ ವಸೂಲಿ ಮಾಡಲು ಬಿಡುವುದಿಲ್ಲ ಎಂದರು. ಸಮಾವೇಶದಲ್ಲಿ ಸಚಿವ ಪರಮೇಶ್ವರ ನಾಯ್ಕ್, ತುಕಾರಾಂ ಸೇರಿದಂತೆ ಹಲವು ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
Advertisement