ಕಲಬುರಗಿ: ಹವಾಲ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಸಿಕ್ಕ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಕಲಬುರಗಿಯ ಶ್ರೀ ಕ್ಷೇತ್ರ ಗಾಣಗಾಪುರದ ಪುರಾಣ ಪ್ರಸಿದ್ಧ ದತ್ತಾತ್ರೇಯ ದೇಗುಲದತ್ತ ಮುಖ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದೇಗುಲಕ್ಕೆ ಭೇಟಿ ನೀಡಲಿರುವ ಸಚಿವರು ವಿಶೇಷ ಪೂಜೆ ನೆರವೇರಿಸಲಿದ್ದಾರೆ.
ಮರದ ಸ್ವರೂಪದಲ್ಲಿರುವ ಶ್ರೀ ದತ್ತಾತ್ರೇಯರು ಹಿಂದೆ ರಾಜ-ಮಹಾರಾಜರು, ಪ್ರಜೆಗಳ ಸಂಕಷ್ಟ ನಿವಾರಣೆ ಮಾಡ್ತಿದ್ದರು ಎಂಬ ಐತಿಹ್ಯ ಈ ದೇಗುಲಕ್ಕಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂಧ್ರ-ಮಹಾರಾಷ್ಟ್ರ ರಾಜ್ಯಗಳ ಅಪಾರ ಭಕ್ತರು ಇಲ್ಲಿಗೆ ಬಂದು ತಮ್ಮ ಸಂಕಷ್ಟಗಳನ್ನು ಕಳೆದುಕೊಂಡಿದ್ದಾರಂತೆ. ಈ ಸನ್ನಿಧಿಗೆ ಸಚಿವೆ ಜಯಮಾಲಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿ ಕೊಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನೂ ಓದಿ: ಸಚಿವ ಡಿಕೆ ಶಿವಕುಮಾರ್ ಅವರಿಗೆ ಷರತ್ತು ಬದ್ಧ ಜಾಮೀನು-ಏನಿದು ಪ್ರಕರಣ ಇಲ್ಲಿದೆ ಮಾಹಿತಿ
Advertisement
Advertisement
ಡಿಕೆ ಶಿವಕುಮಾರ್ ಅವರ ರಾಜಕೀಯ ಗುರು ದ್ವಾರಕನಾಥ ಸಹ ಈ ದೇಗುಲಕ್ಕೆ ಭೇಟಿ ನೀಡಿ ತಮಗೆ ಬಂದ ಸಂಕಷ್ಟದಿಂದ ಪಾರಾಗಿದ್ದಾರಂತೆ. ಇದೀಗ ಸಚಿವ ಡಿ.ಕೆ.ಶಿವಕುಮಾರ್ ಅದೇ ಹಾದಿ ಹಿಡಿದಿದ್ದಾರೆ. ತಮ್ಮ ವಿರುದ್ಧ ಐಟಿ, ಇಡಿ ಹಾಗು ಜಾರಕಿಹೊಳಿ ಬ್ರದರ್ಸ್ ಸಂಕಟದಿಂದ ಪಾರು ಪಾರಾಗಲು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಡಿಕೆ ಶಿವಕುಮಾರ್ ಬಳಿಕ ಸಿಎಂ ಕುಮಾರಸ್ವಾಮಿ ಕೂಡ ಸೆಪ್ಟೆಂಬರ್ 17 ರಂದು ಶ್ರೀ ಕ್ಷೇತ್ರದ ದರ್ಶನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv