ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ನನ್ನ ಸ್ನೇಹಿತ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಜಾರಕಿಹೊಳಿ ನನ್ನ ಸ್ನೇಹಿತ. ಹಿಂದೊಮ್ಮೆ ನಾನು ಬಂಡೆ ಕಲ್ಲಿನ ತರಹ ಅವರ ಜೊತೆ ಇದ್ದವನು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾನೇ ರಮೇಶ್ ಜಾರಕಿಹೋಳಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಮಾತನಾಡುತ್ತೇನೆ. ಭಕ್ತರು ದೇವರ ಮಧ್ಯೆ ಇರುವ ಸಂಬಂಧ ನಿಮಗೆ ಗೊತ್ತಿಲ್ಲ. ಭಕ್ತ ಹಾಗೂ ದೇವರಿಗೆ ಮಾತ್ರ ಗೊತ್ತಿರುತ್ತೆ ಅನ್ನೋ ಮೂಲಕ ನಮ್ಮ ನಡುವೆ ಏನು ಇಲ್ಲ ಅಂತ ಹೇಳಿಕೆ ನೀಡಿದ್ದಾರೆ.
Advertisement
Advertisement
ಡಿಸಿಎಂ ಪರಮೇಶ್ವರ್, ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ಮಾಡಿದ ಬಳಿಕ ಮಾತನಾಡಿದ ಅವರು, 78 ಶಾಸಕರು ಮನೆಯವರಿದ್ದಂತೆ. ಮನೆಯ ಕಷ್ಟ ಸುಖ ವಿಚಾರ ಮಾಡಿದ್ದೇವೆ. ಯಾವುದೇ ವಿಷಯ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
Advertisement
ಇದೇ ವೇಳೆ ಬಿಜೆಪಿ ಶಾಸಕರು ಸಂಪರ್ಕದಲ್ಲಿ ಇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಜಕೀಯದಲ್ಲಿ ಏನೇನೋ ನಡೆಯುತ್ತದೆ. ರಾಜಕೀಯದಲ್ಲಿ ಯಾವಾಗ ಪಾನ್ ಮೂವ್ ಮಾಡಬೇಕು ಅಂತ ನನಗೆ ಗೊತ್ತು ಅಂತ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಎಷ್ಟು ಜನ ಸಂಪರ್ಕದಲ್ಲಿ ಇದ್ದಾರೆ ಅನ್ನೋದಕ್ಕೆ ಬಿಜೆಪಿ ಅವರನ್ನೇ ಕೇಳಿ ಅಂತ ತಿರುಗೇಟು ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv