ಬೆಂಗಳೂರು: ತಾಯಿ ಗೌರಮ್ಮ ಪರವಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕ್ಷಮೆ ಕೇಳಿದ್ದಾರೆ.
ಪುತ್ರ ವಾತ್ಸಲ್ಯದಿಂದ ಅವಿದ್ಯಾವಂತರಾದ ನನ್ನ ತಾಯಿ ಒತ್ತಡದಲ್ಲಿ ಸಿಎಂ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಆದಾಯ ತೆರಿಗೆ ಇಲಾಖೆ ಯಾರ ಅಧೀನದಲ್ಲಿದೆ ಎನ್ನುವ ಅರಿವು ಇಲ್ಲ. ಕೆಲವು ಮಾಧ್ಯಮಗಳು ಅವರ ಮುಗ್ದತೆಯನ್ನು ದುರುಪಯೋಗ ಮಾಡಿಕೊಂಡಿವೆ. ತಾಯಿ ಅವರು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿರಲಿಲ್ಲ. ಆದರೂ ತಾಯಿ ಪರವಾಗಿ ಕ್ಷಮೆ ಕೋರುತ್ತೇನೆ ಡಿಕೆಶಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಮಜಾಯಿಷಿ ನೀಡಿದ್ದಾರೆ.
Advertisement
ಹೇಳಿಕೆಯಲ್ಲಿ ಏನಿದೆ?
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ನನ್ನ ನಿವಾಸದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕೋಡಿಹಳ್ಳಿಯ ತೋಟದ ಮನೆಯಲ್ಲಿ ನನ್ನ ತಾಯಿಯವರು ಮಾಧ್ಯಮದೊಂದಿಗೆ ಮಾತನಾಡುವಾಗ ಪುತ್ರಸಹಜ ವಾತ್ಸಲ್ಯದಿಂದಾಗಿ ಮಾನ್ಯ ಮುಂಖ್ಯಮಂತ್ರಿಗಳ ಬಗ್ಗೆ ಆಡಿದ ಮಾತುಗಳ ಬಗ್ಗೆ ನಾನು ಬಹಿರಂಗವಾಗಿ ಕ್ಷಮಾಪಣೆ ಯಾಚಿಸುತ್ತಿದ್ದೇನೆ.
Advertisement
ನನ್ನ ವೃದ್ಧ ತಾಯಿ ವಿದ್ಯಾವಂತರಲ್ಲ. ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಯಾರ ಅಧೀನದಲ್ಲಿ ಬರುತ್ತದೆ ಎಂಬ ಅರಿವುಳ್ಳ ಪ್ರಜ್ಞಾವಂತೆಯೂ ಅಲ್ಲ. ಒತ್ತಡಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರ ಮುಗ್ಧತೆಯನ್ನು ಕೆಲವು ಮಾದ್ಯಮಗಳು ದುರುಪಯೋಗಪಡಿಸಿಕೊಂಡು ಮುಖ್ಯಮಂತ್ರಿಗಳ ಬಗ್ಗೆ ಹೇಳಿಕೆ ನೀಡುವಂತೆ ಪ್ರಚೋದಿಸಿದೆ.
Advertisement
ನಾನು ನನ್ನ ತಾಯಿಯ ಉದ್ದೇಶಪೂರ್ವಕವಲ್ಲದ ಈ ಹೇಳಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಜನತೆಯ ಕ್ಷೇಮೆ ಕೋರುತ್ತೇನೆ. ಮಾನ್ಯ ಮುಖ್ಯಮಂತ್ರಿಗಳು ಎಂದೆಂದಿಗೂ ನನಗೆ ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ್ದಾರೆ. ಕಷ್ಟದ ಕಾಲದಲ್ಲಿ ನನ್ನ ಮತ್ತು ನನ್ನ ಕುಟುಂಬದ ಬೆನ್ನ ಹಿಂದೆ ನಿಂತು ರಕ್ಷಣೆ ನೀಡಿದ ಮುಖ್ಯಮಂತ್ರಿಗಳು, ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ಹಾಗೂ ಸಾಂತ್ವನ ಹೇಳಿದ ಎಲ್ಲ ಸಹೃದಯರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
Advertisement