ಬಳ್ಳಾರಿ: ತುಮಕೂರಿನ ನೊಣವಿನ ಕೆರೆ ಕಾಡಸಿದ್ದೇಶ್ವರನ ಪ್ರಸಾದ ಹಿಡ್ಕೊಂಡು ಬಳ್ಳಾರಿ ರಣರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಚಿವ ಡಿಕೆ ಶಿವಕುಮಾರ್ ಏಕಾಂಗಿಯಾಗಿದ್ದಾರೆ. ಗಣಿನಾಡು ಗೆಲುವಿಗೆ ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದರೂ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಬರ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯ ವೇಳೆ ಇಬ್ಬರು ಬಿಜೆಪಿ ಹಾಗೂ ಓರ್ವ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‍ಗೆ ಕರೆತಂದ ಸಂತೋಷ ಲಾಡ್ ರನ್ನ ಸಚಿವ ಡಿಕೆ ಶಿವಕುಮಾರ್ ಮರೆತಿದ್ದೇ ಈ ಬೆಳವಣಿಗೆಗೆ ಕಾರಣವಾಗಿದೆ.
Advertisement
ಮಾಜಿ ಸಚಿವ ಸಂತೋಷ್ ಲಾಡ್ ಬಳ್ಳಾರಿ ಕಣದಿಂದಲೇ ದೂರ ಉಳಿದಿರೋದು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಸಂಡೂರು, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಬಳ್ಳಾರಿ ನಗರ ಪ್ರದೇಶದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಸಂತೋಷ್ ಲಾಡ್‍ರನ್ನ ಚುನಾವಣೆಯ ವೇಳೆ ಕಡೆಗಣಿಸಿರುವುದು ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ತೋರಿಸ್ತಿದೆ.
Advertisement
ರಾಮುಲು ಹಿಂದಿದೆ ಬೆಟಾಲಿಯನ್:
ಇತ್ತ ಸಹೋದರಿ ಜೆ ಶಾಂತಾ ಪರವಾಗಿ ಉಗ್ರಪ್ಪ ವಿರುದ್ಧ ಸಮರ ಸಾರಿರುವ ಶ್ರೀರಾಮುಲುಗೆ ಬಿಜೆಪಿ ನಾಯಕರ ದಂಡೇ ಸಾಥ್ ಕೊಡ್ತಿದೆ. ಹತ್ತಾರು ಬಿಜೆಪಿ ಶಾಸಕರು, ಹಲವು ಮಾಜಿ ಸಚಿವರಿಗೆ ಬಳ್ಳಾರಿ ಲೋಕಸಭಾ ಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ. ಅಲ್ಲದೇ ಬಳ್ಳಾರಿಯಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಚಾರ ಕೈಗೊಳ್ಳಲು ವೇದಿಕೆ ಸಿದ್ಧವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv