ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯ ದಲಿತ ಕಾಲೊನಿಯಲ್ಲಿ ಕಲುಷಿತ ನೀರು (Contaminated Water) ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (D Sudhakar) ತಲಾ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಸ್ಥಳೀಯ ಸಂಸ್ಥೆಯಿಂದ ತಲಾ 5 ಲಕ್ಷ ರೂ. ಸೇರಿ ಮೃತರಾದ ಮಂಜುಳಾ, ರಘು, ಪ್ರವೀಣ್, ತಿಪ್ಪೇರುದ್ರಪ್ಪ, ಪಾರ್ವತಮ್ಮ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ನಂತೆ ಪರಿಹಾರ ಚೆಕ್ ವಿತರಿಸಲಾಯಿತು. ಇದನ್ನೂ ಓದಿ: ಜೆಜೆಎಂ ಪೈಪ್‌ಗೆ ಚರಂಡಿ ನೀರು ಸೇರ್ಪಡೆ; ನೀರು ಸೇವಿಸಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ
Advertisement
Advertisement
ಘಟನಾ ಸ್ಥಳಕ್ಕೆ ಶನಿವಾರ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯರಿಂದ ಸಮಸ್ಯೆ ಆಲಿಸಿದರು. ಐವರ ಸಾವಿಗೆ ಕಲುಷಿತ ನೀರು ಸೇವನೆಯೇ ಕಾರಣವಾ? ಅಥವಾ ಮತ್ತಿನ್ನೇನಾದ್ರೂ ಕಾರಣವಿದೆಯೇ? ಎನ್ನುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. FSL ಒಳಗೊಂಡು ಎಲ್ಲಾ ವರದಿ ಬಹಿರಂಗಪಡಿಸಲಾಗುವುದು. ಘಟನೆ ಮುಚ್ಚಿ ಹಾಕುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.
Advertisement
ಸಚಿವರು ಅಸ್ವಸ್ಥರ ಯೋಗ-ಕ್ಷೇಮ ವಿಚಾರಿಸಲು ಜಿಲ್ಲಾಸ್ಪತ್ರೆಗೆ (District Hospital) ಭೇಟಿ ನೀಡಿದ್ದ ವೇಳೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿಲ್ಲ, ಔಷಧ ಹೊರಗಡೆ ಬರೆದುಕೊಡುತ್ತಾರೆ. ಇಲ್ಲಿನ ವೈದ್ಯಾಧಿಕಾರಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದಾಗಿ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬಂದ ಬೆನ್ನಲ್ಲೇ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ ಬಸವರಾಜ್‌ರನ್ನ ಅಮಾನತುಗೊಳಿಸಿದರು.
Advertisement
ಅಸ್ವಸ್ಥರ ಸಂಖ್ಯೆ 190ಕ್ಕೆ ಏರಿಕೆ:
ಕವಾಡಿಗರ ಹಟ್ಟಿಯ ದಲಿತ ಕಾಲೊನಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಸಂಖ್ಯೆ ಈವರೆಗೂ 190ಕ್ಕೆ ಏರಿಕೆಯಾಗಿದೆ. ಶನಿವಾರ ಕೂಡ ಐದಾರು ಮಂದಿಗೆ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದಲ್ಲಿ ಐವರು ಮೃತಪಟ್ಟಿದ್ದು, ಹಳೆಯ ಪ್ರಕರಣಗಳ ಪೈಕಿ 25 ಮಂದಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 22, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 138 ಸೇರಿ 160 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮೃತಪಟ್ಟ ಪಾರ್ವತಮ್ಮ ಹೊರತುಪಡಿಸಿ ಕುಟುಂಬದ 9 ಮಂದಿ ಸದಸ್ಯರು ಚಿಕಿತ್ಸೆಗೆ ದಾಖಲಾಗಿದ್ದರು. ಈ ಪೈಕಿ ಮಗ, ಮಗಳು ಸ್ವಲ್ಪ ಚೇತರಿಕೆ ಕಂಡು ತಾಯಿಯ ಮುಖ ನೋಡಲು ಹಿಂದಿರುಗಿದ್ದು, ಮತ್ತೊಬ್ಬ ಪುತ್ರ ಬಂದ ನಂತರ ಅಂತ್ಯಸಂಸ್ಕಾರ ನಡೆಸಲಾಯಿತು. ಇದನ್ನೂ ಓದಿ: ತೆರಿಗೆ ಕಾನೂನುಗಳು ಸರಳವಾಗ್ಬೇಕು; ಹೆಚ್ಚು ತೆರಿಗೆ ಸಂಗ್ರಹವಾಗ್ತಿದ್ರೆ, ದೇಶದ ಅಭಿವೃದ್ಧಿಯ ಸಂಕೇತ: ಬೊಮ್ಮಾಯಿ
ಪರಿಸ್ಥಿತಿಯ ಬಗ್ಗೆ ವಿವರವಾಗಿ ಅವಲೋಕಿಸಲು ಬೆಂಗಳೂರಿನ ಸಿ.ವಿ ರಾಮನ್ ಆಸ್ಪತ್ರೆ ವೈದ್ಯರ ತಂಡ ಕವಾಡಿಗರಹಟ್ಟಿಗೆ ಆಗಮಿಸಿ ಬೀಡು ಬಿಟ್ಟಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಬಿಎಂಆರ್‌ಸಿ ಆಸ್ಪತ್ರೆಯಿಂದ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದಾರೆ. ಸ್ಥಳದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನು ನೀಡಲಾಗಿದೆ. ತುರ್ತು ಸ್ಪಂದನಾ ತಂಡ ಗ್ರಾಮದಲ್ಲಿದ್ದು, ವಾಂತಿ ಬೇಧಿ ಲಕ್ಷಣ ಕಂಡುಬಂದರೆ ತಕ್ಷಣೆವೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಡಿಹೆಚ್‌ಓ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
Web Stories