ಮಂಡ್ಯ: ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಹೇಳಿಕೆ ನೀಡಿದ್ದಾರೆ.
ಸಚಿವ ಡಿ.ಸಿ. ತಮ್ಮಣ್ಣ ಅವರು ಮದ್ದೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಕುರುಬರದೊಡ್ಡಿ ಗ್ರಾಮದಲ್ಲಿ, ನಿಮಗೆಲ್ಲಾ ಮಾಡಿಕೊಡುತ್ತಾರೆ, ಮಾಡಿಸಿಕೊಳ್ಳಿ. ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ. ನನಗೇನಿಲ್ಲ ನಾನೇನಿದ್ದರೂ ನೇರ. ನಾನೇನು ಗೂಟ ಹೊಡೆದುಕೊಂಡು ಇಲ್ಲೇ ಕೂರಬೇಕಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಮದ್ದೂರು ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಡಿ.ಸಿ ತಮ್ಮಣ್ಣ ಅವರ ಬಳಿ ಕೇಳಿಕೊಂಡಿದ್ದರು.
Advertisement
ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಮದ್ದೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದರು.
Advertisement
ಈ ಹಿಂದೆ ಡಿ.ಸಿ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸುಮಲತಾ ಅವರು, ಒಬ್ಬ ಸಚಿವರಾಗಿ ಡಿಸಿ ತಮ್ಮಣ್ಣ ಈ ರೀತಿ ಮಾತಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಈ ರೀತಿ ಮಾತಾಡಿರುವುದರಿಂದಲೇ ಮತದಾರರು ಪಾಠ ಕಲಿಸಿದ್ದಾರೆ. ನನನ್ನು ಟಾರ್ಗೆಟ್ ಮಾಡಿದರೆ ಸಹಿಸಿಕೊಳ್ಳುತ್ತೇನೆ. ಆದರೆ ಜನರನ್ನ ಟಾರ್ಗೆಟ್ ಮಾಡುವುದು ಸರಿಯಲ್ಲ. ಸಚಿವರಿಗೆ ಜೆಡಿಎಸ್ ಮುಖಂಡರು ಬುದ್ಧಿವಾದ ಹೇಳಬೇಕು ಎಂದು ಕಿಡಿಕಾರಿದರು.