ಬೆಂಗಳೂರು: ಯಲಹಂಕದಲ್ಲಿ (Yelahanka) ನಡೆದಿದೆ ಎನ್ನಲಾದ ಜಾತಿ ನಿಂದನೆ ಹಾಗೂ ಭೂ ಕಬಳಿಕೆ ವಿಚಾರದಲ್ಲಿ ಸಚಿವ ಡಿ.ಸುಧಾಕರ್ (D.Sudhakar) ವಿರುದ್ಧದ ತನಿಖೆ ಚುರುಕುಗೊಂಡಿದೆ. ಈ ವಿಚಾರವಾಗಿ ಯಲಹಂಕ ಪೊಲೀಸರು (Police) ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಸಚಿವರು ಸೇರಿದಂತೆ ಹಲವರಿಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ.
ಮುನಿಯಮ್ಮ ಎಂಬುವವರ ಜಾಗದ ಕಬಳಿಕೆ ಮಾಡಿಕೊಂಡು ಸಚಿವ ಹಾಗೂ ಬೆಂಬಲಿಗರಿಂದ ಅವರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಮಹಜರು ಮಾಡಿದ್ದಾರೆ. ಪ್ರಕರಣದ ತನಿಖೆ ತೀವ್ರಗೊಳಿಸಿದ್ದು ಅಗತ್ಯ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್
ಸಚಿವ ಸೇರಿ ಎಫ್‍ಐಆರ್‌ನಲ್ಲಿ ಉಲ್ಲೇಖಿಸಿರುವ ಹಾಗೂ ದೂರು ದಾಖಲಿಸಿದವರು ಸೇರಿದಂತೆ ಸ್ಥಳದಲ್ಲಿದ್ದ ವ್ಯಕ್ತಿಗಳಿಗೂ ನೋಟಿಸ್ ನೀಡಿ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ವೀಡಿಯೋದಲ್ಲಿರುವ ವ್ಯಕ್ತಿಗಳ ಗುರುತು ಪತ್ತೆಗೆ ತನಿಕಾಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಜಾಗದಲ್ಲಿ ಬಾಡಿಗೆಗೆ ಇದ್ದವರನ್ನು ಸಹ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ. ಬಾಡಿಗೆ ಹಣ ಯಾರಿಗೆ ನೀಡುತ್ತಿದ್ದರು? ಯಾರ ಹೆಸರಲ್ಲಿ ಬಾಡಿಗೆ ನೀಡುತ್ತಿದ್ದರು? ಎಂದು ಮಾಹಿತಿ ಪಡೆಯಲು ಬಾಡಿಗೆದಾರರಿಗೂ ನೋಟಿಸ್ ನೀಡಲು ನಿರ್ಧರಿಸಲಾಗಿದೆ.
ವೀಡಿಯೋದಲ್ಲಿರುವ ವ್ಯಕ್ತಿಗಳಿಗೂ ದೂರುದಾರರ ನಡುವಿನ ಗಲಾಟೆಗೆ ಕಾರಣ ಏನು? ಸಚಿವ ಮತ್ತು ವೀಡಿಯೋದಲ್ಲಿರುವ ವ್ಯಕ್ತಿಗಳ ನಡುವಿನ ಸಂಬಂಧ ಏನು? ಘಟನೆ ವೇಳೆ ಸಚಿವರು ಸ್ಥಳದಲ್ಲಿ ಇದ್ರಾ ಇಲ್ವಾ? ಸುಧಾಕರ್ ಅವರ ಕುಮ್ಮಕ್ಕಿನಿಂದ ಗಲಾಟೆ ನಡೆದಿದೆಯೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಚಿವರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆನ್ನಲಾದ ಕುಟುಂಬವನ್ನು ಗುರುವಾರ ಬಿಜೆಪಿ ನಾಯಕರು ಭೇಟಿಯಾಗಲು ಮುಂದಾಗಿದ್ದಾರೆ. ಮಾಜಿ ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನಿಯೋಗದಿಂದ ಭೇಟಿಯಾಗಲಿದೆ. ಇದನ್ನೂ ಓದಿ: ಡಿ ಸುಧಾಕರ್ ರಾಜೀನಾಮೆ ಪಡೆದು ಬಂಧನ ಮಾಡಿ: ಹೆಚ್‌ಡಿಕೆ
Web Stories