ಬಳ್ಳಾರಿ: ದೋಸ್ತಿ ಸರ್ಕಾರ ಕೆಡವಲು ಬಿಜೆಪಿ ಮೌನಕ್ರಾಂತಿ ನಡೆಸುತ್ತಿದ್ದರೆ ಇತ್ತ ಕೈ ನಾಯಕರು ಬಿಜೆಪಿಗೆ ರಿವರ್ಸ್ ಆಪರೇಷನ್ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಮಧ್ಯರಾತ್ರಿ ಬಿಜೆಪಿಗರ ಮನೆಗೆ ಹೋಗಿ ಊಟ ಮಾಡಿ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಒಂದೆಡೆ ರೆಡ್ಡಿ-ರಾಮುಲು ಸಹೋದರರು ಬಿಜೆಪಿ ಪರವಾಗಿ ಆಪರೇಷನ್ ಗೆ ಇಳಿದ್ರೆ ಇನ್ನೊಂದೆಡೆ ಜನಾರ್ದನರೆಡ್ಡಿ ಸಹೋದರ, ಹರಪನಹಳ್ಳಿ ಶಾಸಕ ಕರುಣಾಕರರೆಡ್ಡಿಯನ್ನೆ ಕೈ ಪಾಳಯಕ್ಕೆ ಕರೆತರಲು ಡಿಕೆ ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದಾರೆ. ಈಗಾಗಲೇ ಕರುಣಾಕರರೆಡ್ಡಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಡಿಕೆ ಬ್ರದರ್ಸ್, ರೆಡ್ಡಿ-ರಾಮುಲು ಬ್ರದರ್ಸ್‍ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅಲ್ಲದೆ ಕರುಣಾಕರರೆಡ್ಡಿ ಸಹ ಕಳೆದ ತಿಂಗಳೂ ಬಿಜೆಪಿ ಶಾಸಕರು ಗುರುಗಾಂವ್ ರೆಸಾರ್ಟ್‍ಗೆ ಹೋದ ವೇಳೆ ಗೈರು ಹಾಜರಾಗಿದ್ದು ರಿವರ್ಸ್ ಆಪರೇಷನ್‍ಗೆ ಮತ್ತಷ್ಟೂ ಸಾಕ್ಷಿ ದೊರೆತಂತಾಗಿದೆ.
ಹರಪನಹಳ್ಳಿ ಶಾಸಕ, ರೆಡ್ಡಿ ಸಹೋದರ ಕರುಣಾಕರರೆಡ್ಡಿಯನ್ನ ರಿವರ್ಸ್ ಆಪರೇಷನ್ ಮೂಲಕ ಕಾಂಗ್ರೆಸ್ ಗೆ ಸೆಳೆಯಲು ಡಿಕೆ ಬದ್ರರ್ಸ್ ಮಾತುಕತೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈಗಾಗಲೇ ಕಾಂಗ್ರೇಸ್‍ನಿಂದ ದೂರವಾಗಿರುವ ಶಾಸಕರಾದ ನಾಗೇಂದ್ರ- ಗಣೇಶರ ವಿರುದ್ಧವೂ ಡಿಕೆಶಿವಕುಮಾರ್ ಮಸಲತ್ತು ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ನಾಗೇಂದ್ರ ವಿರೋಧಿಯಾಗಿ ಸ್ಪರ್ಧೆ ಮಾಡಿದ್ದ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಹಾಗೂ ಕಂಪ್ಲಿಯ ಮಾಜಿ ಶಾಸಕ ಸುರೇಶಬಾಬುರನ್ನ ಕಾಂಗ್ರೇಸ್‍ಗೆ ಸೆಳೆಯಲು ಡಿಕೆ ಶಿವಕುಮಾರ್ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಈ ಮೂಲಕ ಬಿಜೆಪಿ ಆಪರೇಷನ್‍ಗೆ ಮುಂದಾದ್ರೆ ಶಾಸಕ ಶ್ರೀರಾಮುಲು ಅವರಿಗೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕನ ಮನೆಯಿಂದಲೇ ರಾಜಕೀಯ ರಣತಂತ್ರಕ್ಕೆ ಮುಂದಾಗಿದ್ದಾರೆ. ಇದೂ ಶಾಸಕ ಶ್ರೀರಾಮುಲು ಮನೆಯಲ್ಲೆ ರಾಜಕೀಯ ಕಿಚ್ಚು ಹಚ್ಚಿದಂತಗಾಗುತ್ತದೆ ಅನ್ನೋದು ಡಿಕೆಶಿ ಮಾಸ್ಟರ್ ಪ್ಲಾನ್ ಆಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಶಾಸಕ ಶ್ರೀರಾಮುಲು ಕಾಂಗ್ರೆಸ್ ಶಾಸಕರನ್ನ ಸೆಳೆಯಲು ಸೆಚ್ಕ್ ಹಾಕಿದ್ರೆ ಸಚಿವ ಡಿಕೆ ಶಿವಕುಮಾರ್ ಅವರು ರೆಡ್ಡಿ ಸಹೋದರ ಕರುಣಾಕರೆಡ್ಡಿ, ಶಾಸಕ ಶ್ರೀರಾಮುಲು ಅಣ್ಣ ಹಾಗೂ ಅವರ ಸೋದರಳಿಯನನ್ನೆ ಕಾಂಗ್ರೇಸ್ ಗೆ ಸೆಳೆಯಲು ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv