ಮಂಡ್ಯ: ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತೆ. ನಿಮ್ಮ ವಯಸ್ಸು, ಸಮಯ, ಭವಿಷ್ಯವನ್ನು ವೇಸ್ಟ್ ಮಾಡಿಕೊಳ್ಳದೇ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಇಂಧನ ಸಚಿವ ಡಿಕೆ.ಶಿವಕುಮಾರ್ ರಾಜ್ಯದ ಜನರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
ಮಂಡ್ಯದ ಹಳೇ ಕಾಂಗ್ರೆಸ್ ಕಚೇರಿಯಲ್ಲಿ ಟಿಕೆಟ್ ವಂಚಿತರ ಭಿನ್ನಮತ ಶಮನಗೊಳಿಸಿ ಮಾತನಾಡಿದ ಅವರು, ಅಂಬರೀಶ್ ಅವರ ಅನುಪಸ್ಥಿತಿ ಕಾಡುತ್ತಿಲ್ಲ. ಅವರ ಆರೋಗ್ಯ ನಮಗೆ ಭಾರೀ ಮುಖ್ಯ. ಅವರನ್ನು ಪ್ರಚಾರಕ್ಕೆ ಬನ್ನಿ ಎಂದು ಒತ್ತಾಯ ಮಾಡಲ್ಲ ಅಂದ್ರು. ಇದನ್ನೂ ಓದಿ: ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ
ಈ ಬೆನ್ನಲ್ಲೇ, ಜೆಡಿಎಸ್ ಮುಖಂಡ ಸಿದ್ದರಾಮೇಗೌಡ ಅವರ ಮನೆಗೆ ಮಧ್ಯರಾತ್ರಿ ತೆರಳಿದ ಪವರ್ ಮಂತ್ರಿ ಡಿಕೆಶಿ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರು. ಪಕ್ಷ ಸೇರ್ಪಡೆ ನಂತ್ರನೂ ಮಾತನಾಡಿ ರಾಜಕಾರಣದಲ್ಲಿ ರಾತ್ರಿ ಕಾರ್ಯಾಚರಣೆಯೆಲ್ಲ ಮಾಡಬೇಕಾಗುತ್ತೆ ಎಂದು ತಮಾಷೆ ಮಾಡಿದ್ರು.