ಚಿತ್ರದುರ್ಗ: ಬರದ ಹಿನ್ನೆಲೆಯಲ್ಲಿ ಬೆಳೆ ಹಾನಿಯಿಂದಾಗಿ ನಷ್ಟ ಅನುಭವಿಸಿರುವ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಿಮ್ಮನಹಳ್ಳಿ ವಯೋ ವೃದ್ಧೆಯೊಬ್ಬರಿಗೆ (Old Woman) ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (Chaluvaraya Swamy) ವೈಯಕ್ತಿಕವಾಗಿ 25,000 ರೂ. ನಗದು ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪತಿ ಇಲ್ಲದೆ ಒಂಟಿಯಾಗಿ ಬದುಕುತ್ತಿರುವ ವೃದ್ಧೆ ಜಯಮ್ಮ ಶೇಂಗಾ ಬೆಳೆಗಾಗಿ 1 ಲಕ್ಷ ರೂ. ವೆಚ್ಚ ಮಾಡಿದ್ದರು. ಆದರೆ ಮಳೆ ಇಲ್ಲದೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಬೆಳೆ ವಿಮೆಗೂ ನೋಂದಣಿ ಮಾಡಿಲ್ಲ. ಪತಿ ನಿಧನರಾಗಿದ್ದು ವೃದ್ಧೆಗೆ ಪುತ್ರರಿಲ್ಲ. ಮಗಳು ತಮ್ಮ ಪತಿಯೊಂದಿಗೆ ವಾಸವಾಗಿರುವ ಹಿನ್ನೆಲೆಯಲ್ಲಿ ಜಯಮ್ಮ ತಮ್ಮ ಸಂಕಷ್ಟ ತೋಡಿಕೊಂಡರು. ಸಚಿವರ ಕಾಲಿಗೆ ನಮಸ್ಕರಿಸಿ ಸಂಕಷ್ಟ ವಿವರಿಸಿದ ವೃದ್ಧೆಯ ಸ್ಥಿತಿ ಕಂಡು ಮರುಗಿದ ಸಚಿವರು ಸ್ಥಳದಲ್ಲೇ ವೈಯಕ್ತಿಕ ನೆರವು ನೀಡಿ ಸಂತೈಸಿದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲ: ಕಟೀಲ್ ವಾಗ್ದಾಳಿ
Advertisement
Advertisement
ಇನ್ನು ಮಳೆ ಇಲ್ಲದೆ ಈ ಭಾಗದಲ್ಲಿ ಶೇಂಗಾ, ಮೆಕ್ಕೆಜೋಳ ಬೆಳೆ ಸಂಪೂರ್ಣ ವಿಫಲ ಹಿನ್ನೆಲೆಯಲ್ಲಿ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವರು ರೈತರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಸಾಥ್ ನೀಡಿದರು. ಇದನ್ನೂ ಓದಿ: CWRC ಶಿಫಾರಸ್ಸು ಎತ್ತಿ ಹಿಡಿದ CWMA – ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಸಾಧ್ಯತೆ
Advertisement
Web Stories