ಬೆಂಗಳೂರು: ಹೆಚ್ಚುವರಿ ಡಿಸಿಎಂ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದರ ಬಗ್ಗೆ ನಾನು ಮಾತಾಡೊಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ತಿಳಿಸಿದರು.
3 ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಮಾಡುವ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್‌ಗೆ ತೀರ್ಮಾನ ಮಾಡೋ ಶಕ್ತಿ ಇದೆ. ಯಾರ ಬೇಡಿಕೆ ಸರಿ ತಪ್ಪು, ಯಾರ ಬೇಡಿಕೆ ಈಡೇರಿಸಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರಕ್ಕೆ ನಾವು ಮಧ್ಯೆ ಹೋಗೋದು ಸರಿಯಲ್ಲ. ನನ್ನ ಅಭಿಪ್ರಾಯ ಈ ವಿಚಾರದಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ ಆಗುತ್ತದೆ ಎಂದರು. ಇದನ್ನೂ ಓದಿ: ನಿಗಮಗಳ ನಿರ್ದೇಶಕರು, ಸದಸ್ಯರ ಆಯ್ಕೆ; ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಪರಮೇಶ್ವರ್
Advertisement
Advertisement
ನನ್ನ ಸಹೋದ್ಯೋಗಿಗಳೇ ಹೇಳಿದ್ರೆ ಅದಕ್ಕೆ ನಾನೇನು ಹೇಳೋಕೆ ಆಗುತ್ತದೆ. ಸಿಎಂ, ಅಧ್ಯಕ್ಷರು, ಎಐಸಿಸಿ ನಾಯಕರು ಇದನ್ನ ತೀರ್ಮಾನ ಮಾಡಬೇಕು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಹೇಳಿದರು.
Advertisement
Advertisement
ಚುನಾವಣೆ ಮುಂಚೆ ಸಿದ್ದರಾಮಯ್ಯ, ಡಿಕೆ ಬಣ ಅಂತಾ ನೀವೇ ಹೇಳಿದ್ರಿ. ಆದರೆ ಅದು ಆಗಲಿಲ್ಲ. ಸಿಎಂ ಆಗೋವಾಗಲೂ ಹೇಳಿದ್ರಿ. ಪಾಪ ನಮ್ಮ ಮೇಲೆ ಪ್ರೀತಿ ಮತ್ತು ಬೇರೆಯವರ ಒತ್ತಡ ನಿಮ್ಮ ಮೇಲೆ ಇದೆ. ಲೋಕಸಭೆ ಚುನಾವಣೆಗೆ ಕಿತ್ತಾಡುತ್ತೀರಾ ಅಂತಾ ಹೇಳಿದ್ರಿ. 9 ಸೀಟು ಗೆದ್ದು ಆಯ್ತು. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲರು ಚೆನ್ನಾಗಿ ಇದ್ದಾರೆ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಕೂಡಾ ಒಟ್ಟಾಗಿ ಇದ್ದಾರೆ. ರಾಜಣ್ಣ ಹೇಳಿಕೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಮತಗಳಿಂದ್ಲೇ ಸಾಗರ್ ಖಂಡ್ರೆ ಗೆದ್ದಿರೋದು: ಜಮೀರ್ ವಿವಾದ