ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ (Mutton) 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ… ಒಂದು ಸರ್ಕಾರದ ತೀರ್ಮಾನಕ್ಕೆ ಈ ರೀತಿ ಮಾತಾಡೋದು ಸರಿನಾ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy,) ಪ್ರಶ್ನಿಸಿದ್ದಾರೆ.
ಮಟನ್ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ… – ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ#KSRCT #Bengaluru #BusTicketPrice #BusTicket #Siddaramaiah #chaluvarayaswamy pic.twitter.com/kVNC8sumMX
— PublicTV (@publictvnews) January 3, 2025
ಬಸ್ ಟಿಕೆಟ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಗೂ ಟಿಕೆಟ್ ದರ ಏರಿಕೆಗೂ ಸಂಬಂಧ ಇಲ್ಲ. ದರ ಪರಿಷ್ಕರಣೆ ಆಗಿ 10 ರಿಂದ 15 ವರ್ಷ ಆಗಿದೆ. ನೀವು ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೆ ತಗೋತೀರ, ಬೇಳೆ, ಎಣ್ಣೆ ತಗೋತೀರ.. ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ – ಆರೋಪಿ ಬಂಧನ
ಆಂಧ್ರ, ಕೇರಳ, ತೆಲಂಗಾಣದಲ್ಲಿ ನಮಗಿಂತಲೂ ಹೆಚ್ಚಾಗಿ ಏರಿಕೆ ಮಾಡಿ ಮಾಡಿದ್ದಾರೆ. ಆದ್ರೆ ನಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಅಲ್ಲದೇ 7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಮಾಡಿದಾಗ, ಸಂಸ್ಥೆ ಚೆನ್ನಾಗಿ ನಡೆಯಬೇಕು ಅಂದ್ರೆ, ಗ್ರಾಮೀಣ ಪ್ರದೇಶಕ್ಕೆ ಸೇವೆ ಒದಗಿಸಬೇಕು, ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕು ಅಂದ್ರೆ ದರ ಏರಿಕೆ ಅನಿವಾರ್ಯ. 2-3 ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು
ಇನ್ನೂ ಸಂಕ್ರಾಂತಿಗೆ ಸರ್ಕಾರ ಇರಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರತಿಬಾರಿ ದೇವೇಗೌಡರು ಈ ಸರ್ಕಾರ ಇರಲ್ಲ ಅಂತಿದ್ದರು. ಅಪ್ಪನ ಚಾಳಿ ಮಗನಿಗೆ ಬಂದಿದೆ. ಸರ್ಕಾರವನ್ನು ಕುಮಾರಸ್ವಾಮಿ ನಿರ್ಧಾರ ಮಾಡ್ತಾರಾ..? ಜನರು ತೀರ್ಮಾನ ಮಾಡೋದು. ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನಮಗೆ ಜನರ ಸರ್ಟಿಫಿಕೇಟ್ ಅಷ್ಟೇ ಬೇಕು. ಮೂರು ಚುನಾವಣೆಗಳಲ್ಲಿ ಜನ ಏನು ತೀರ್ಪು ಕೊಟ್ರು? ನೀವೇ ಇದರ ಬಗ್ಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ – ಪ್ರಯಾಣಿಕರಿಗೆ ಗುಲಾಬಿ ಕೊಟ್ಟು ಸರ್ಕಾರದ ವಿರುದ್ಧ ಅಶೋಕ್ ಆಕ್ರೋಶ
ಇದೇ ವೇಳೆ ಬೆಂಗಳೂರಿನಲ್ಲಿ ಸಚಿವರ ಜೊತೆ ಸಿಎಂ ಡಿನ್ನರ್ ಮೀಟಿಂಗ್ ವಿಚಾರ ಕುರಿತು ಮಾತನಾಡಿ, ಎಲ್ಲರೂ ನಮಗೆ ಸ್ನೇಹಿತರೇ, ಹಾಗಾಗಿ ಏನು ಮಾತನಾಡಬೇಕೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ