ಸುಧಾಕರ್‌ಗೆ ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು: ಚಲುವರಾಯಸ್ವಾಮಿ ವ್ಯಂಗ್ಯ

Public TV
1 Min Read
CHALUVARAYASWAMY

– ಅಶೋಕ್‌ಗೆ ಹಿಂದಿಲ್ಲ, ಮುಂದಿಲ್ಲ

ಬೆಂಗಳೂರು: ಸಂಸದ ಡಾ.ಕೆ ಸುಧಾಕರ್‌ಗೆ (Dr. K.Sudhakar) ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು. ಕೋವಿಡ್ ವೇಳೆ ಎಷ್ಟು ನಿಭಾಯಿಸಿದ್ದರು ಅಂತ ಗೊತ್ತಲ್ವಾ? ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (N.Chaluvaraya Swamy) ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಳಸಂತೆಯಲ್ಲಿ ಗೊಬ್ಬರ (Fertilizer Shortage) ಮಾರಾಟ ಮಾಡಲಾಗುತ್ತಿದೆ ಎಂಬ ಸುಧಾಕರ್‌ ಅವರ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು ಡಾಕ್ಟರ್ ಓದಿದ್ದಾರೋ ಇಲ್ವೋ ಗೊತ್ತಿಲ್ಲ, ಕೇಂದ್ರದಲ್ಲಿ ಸಂಸದರಾಗಿದ್ದಾರೆ. ರಸಗೊಬ್ಬರದ ವಿಚಾರವಾಗಿ ಬುಧವಾರ ಎಲ್ಲಾ ಡಿಟೇಲ್ಸ್ ಕೊಟ್ಟಿದ್ದೇನೆ. ಸಣ್ಣ ಹಿಡುವಳಿದಾರರು ಇರ್ತಾರೆ, ದೊಡ್ಡ ಹಿಡುವಳಿದಾರರು ಇರ್ತಾರೆ. ನಮಗೆ ಕೇಂದ್ರ ಸರ್ಕಾರ 1.36 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೊಟ್ಟಿಲ್ಲ, 2.28 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬರಬೇಕಿತ್ತು. ಇದಕ್ಕಾಗಿ ಕೃಷಿ ಸಚಿವರಿಗೆ ಮನವಿ‌ ಮಾಡಿದ್ದೇವೆ. ನಡ್ಡಾ ಅವರ ಭೇಟಿಗೂ ಅವಕಾಶ ಕೇಳಿದ್ದೇವೆ. ಇನ್ನೂ ಶ್ರೀಲಂಕಾವನ್ನು ಕಂಟ್ರೋಲ್ ಮಾಡೋರು ಯಾರು? ಎಲ್ಲವೂ ಕೇಂದ್ರ ಸರ್ಕಾರವೇ ತಾನೇ? ರಾಜಕೀಯವಾಗಿ ತೀಟೆ ಮಾಡೋರನ್ನ ಹೇಗೆ ಏನಂತ ಹೇಳೋದು? ಎಂದ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆ ಸರಿಪಡಿಸಲು ಕರ್ನಾಟಕ ಸಿಎಸ್‌ಗೆ ಸೂಚಿಸಿ – ಕೇಂದ್ರಕ್ಕೆ ಡಾ.ಕೆ.ಸುಧಾಕರ್ ಆಗ್ರಹ

ಅಶೋಕ್ (R.Ashok) ಸುಮ್ಮನೆ ಮಾತನಾಡ್ತಾರೆ, ಅವರಿಗೆ ಹಿಂದಿಲ್ಲ ಮುಂದಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರೇಟ್ ಫಿಕ್ಸ್ ಮಾಡೋರು ಕೇಂದ್ರದವರು, ಪೂರೈಕೆ ಮಾಡುವವರು ಅವರು. ನಮ್ಮದು ಬರಿ ಹಂಚಿಕೆ ಮಾತ್ರ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲೂ ರಸಗೊಬ್ಬರ ಕೊರತೆ – ಕೇಂದ್ರದ ವಿರುದ್ಧ ಸಿಎಂ ಕಿಡಿ

Share This Article