ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಡಿನ್ನರ್ ಮೀಟಿಂಗ್ (Dinner Meeting) ಕರೆದಿರೋದು ಯಾಕೆ ಅಂತ ನನಗೆ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ (Chaluvaraya Swamy) ತಿಳಿಸಿದ್ದಾರೆ.
ಸಚಿವರಿಗೆ ಸಿಎಂ ಸಿದ್ದರಾಮಯ್ಯ ಅವರು ಅ.13ರ ರಾತ್ರಿ ಔತಣಕೂಟಕ್ಕೆ ಆಹ್ವಾನ ನೀಡಿದ ವಿಚಾರವಾಗಿ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ, ನನಗೆ ಏನು ವಿಷಯ ಅಂತ ಗೊತ್ತಿಲ್ಲ. ಇದಕ್ಕೂ ಮುನ್ನ ಎರಡ್ಮೂರು ಸಭೆ ಬಾರಿ ಕರೆದಿದ್ದಾರೆ.ಈ ವೇಳೆ ಸರ್ಕಾರದ ಕಾರ್ಯಕ್ರಮ, ಅಭಿವೃದ್ಧಿ, ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದರು. ಈಗಲೂ ಅದೇ ಇರಬಹುದು. ಆದ್ರೆ ಸಂಪುಟ ಪುನರ್‌ಚನೆ ಬೇರೆ. ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್‌ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್‌ಫಾಸ್ಟ್ ಮೀಟಿಂಗ್
ಸಂಪುಟ ಪುನರ್‌ಚನೆ ಎಲ್ಲವೂ ಪಕ್ಷ ಮತ್ತು ಸಿಎಂ ಅವರಿಗೆ ಬಿಟ್ಟಿದ್ದು. ಅವರಿಗೆ ಸಂಬಂಧಿಸಿದ್ದು. ಖಾತೆ ಬದಲಾವಣೆ, ಸಂಪುಟ ಪುನಾರಚನೆ, ಹೊಸಬರನ್ನ ತೆಗೆದುಕೊಳ್ಳೋದು ಸಿಎಂ ಅವರಿಗೆ ಬಿಟ್ಟಿದ್ದು. ಎರಡೂವರೆ ವರ್ಷ ಆದ್ಮೇಲೆ ಬೇರೆಯವರಿಗೆ ಅವಕಾಶ ನೀಡಬೇಕು ಅಂತ ಹೇಳ್ತಾರೆ. ಸಚಿವರ ಮೌಲ್ಯಮಾಪನ ಅಂತ ಏನಿಲ್ಲ. ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ. ಎಲ್ಲರಿಗೂ ಸಚಿವರು ಆಗೋ ಆಸೆ ಇರುತ್ತದೆ ಹೈಕಮಾಂಡ್ ಹಾಗೂ ಸಿಎಂ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದೆ: ನಾರಾಯಣಸ್ವಾಮಿ