ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತುಂಬಾ ಸರಳ ವ್ಯಕ್ತಿ ಎಂದೇ ಹೆಸರಾದವರು. ಆದರೆ ಯಾಕೋ ಸಚಿವರಾದ ನಂತರ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ.
ಇಂದು ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿಗೆ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದಾರೆ.
ಈ ದೃಶ್ಯವನ್ನು ನೋಡಿದ ಜನ ಶಾಸಕರಾಗಿದ್ದಾಗ ತುಂಬ ಸರಳವಾಗಿದ್ದ ಪುಟ್ಟರಂಗ ಶೆಟ್ಟಿ ಇದೀಗ ಸಚಿವರಾದ ಬಳಿಕ ಅಲ್ಪನಿಗೆ ಐಶ್ವರ್ಯ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=lPjIVJAvrF8&feature=youtu.be