ಧಾರವಾಡ: ಹೈಫೈ ಲೈಫ್‌ನಲ್ಲಿ ಬೆಳೆದ ಶಾಸಕ ಪ್ರಿಯಾಂಕ್ ಖರ್ಗೆ ʼPriyank Kharge) ಅವರು ಜೊಲ್ಲು ಸುರಿಸುವುದರಲ್ಲಿ ನಿಸ್ಸೀಮರು ಎಂದು ಸಚಿವ ಬಿ.ಸಿ ಪಾಟೀಲ್ (BC Patil) ಲೇವಡಿ ಮಾಡಿದ್ದಾರೆ.
ಬಿಜೆಪಿ (BJP) ಜೊಲ್ಲು ಸುರಿಸುತ್ತಿದೆ ಎನ್ನುವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು (Minister), ಪ್ರಿಯಾಂಕ್ ಖರ್ಗೆ ಅವರಿಗೆ ಗೊತ್ತಿದೆ. ಅವರು ಜೊಲ್ಲು ಸುರಿಸುವುದರಲ್ಲಿ ನಿಸ್ಸೀಮರು. ಅವರೆಲ್ಲ ಹೈಫೈ ಲೈಫ್ (Life)ನಲ್ಲಿ ಬೆಳೆದವರು ವಾಸ್ತವಾಂಶದ ಅರಿವಿಲ್ಲ, ರೈತರ ಬಗ್ಗೆ ಕಾಳಜಿಯೂ ಇಲ್ಲ, ಹೀಗಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಈ ಹಿಂದೆಯೂ ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದು, ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಭಾರತದ ವೀಸಾ ನಿಯಮ ಉಲ್ಲಂಘನೆ – 17 ಬಾಂಗ್ಲಾ ಪ್ರಜೆಗಳು ಅರೆಸ್ಟ್
ಮುಂದುವರಿದು ಸಿಎಂ ಟೀಕಿಸಿದ ವಿಚಾರವಾಗಿ ಮಾತನಾಡಿದ ಬಿಸಿ ಪಾಟೀಲ್, ಬೊಮ್ಮಾಯಿ (Basavaraj Bommai) ದಡ್ಡರಿಲ್ಲ, ಅತ್ಯಂತ ಚಾಣಾಕ್ಷರಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್ ಗಾಂಧಿ – ಸರಳಜೀವಿ ಎಂದ ನೆಟ್ಟಿಗರು
ಸಿಎಂಗೆ ಭಾಷಣ ಮಾಡುವುದು ಗೊತ್ತಿದೆ, ಯಾವುದೇ ಕಾರ್ಯಕ್ರಮ ನಿಭಾಯಿಸುವ ಶಕ್ತಿ ಬೊಮ್ಮಾಯಿ ಅವರಿಗೆ ಇದೆ. ಯಾವುದೇ ವಿಷಯ ತೆಗೆದುಕೊಂಡರೂ ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ. ಪ್ರಿಯಾಂಕ ಖರ್ಗೆಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕುಟುಕಿದ್ದಾರೆ.