ಕೊಪ್ಪಳ: ನನಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ಅಪಾರ ಗೌರವ ಇದೆ. ಪ್ರಧಾನಿ ಮೋದಿ ಸಾಯಲಿ ಅಂತಾ ಹೇಳಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ನನಗೆ ಗೌರವ ಇದ್ದು, ನಾನು ಉದ್ದೇಶಪೂರ್ವಕವಾಗಿ ಯಾವುದನ್ನೂ ಹೇಳಿಲ್ಲ. ನನ್ನ ಉದ್ದೇಶ ಪ್ರಧಾನ ಮಂತ್ರಿ ಸಾಯಲಿ ಎಂಬುದು ಇರಲಿಲ್ಲ. ಯಾರೇ ಆಗಲಿ ಭಯದ ವಾತಾವರಣದಲ್ಲಿ ರಾಜಕಾರಣಿಗಳು ಕೆಲಸ ಮಾಡಬಾರದು ಎನ್ನುವುದನ್ನು ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
Advertisement
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇನೆ. ನಾನು ತಪ್ಪು ಮಾಡಿದ್ದರೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಅಧಿಕಾರದ ಆಸೆ ನನಗಿಲ್ಲ ನೈತಿಕವಾಗಿ ಬದುಕುತ್ತಿದ್ದೇನೆ. ದೇಶದಲ್ಲಿ ವಿಐಪಿ ಸಂಸ್ಕೃತಿ ಹೋಗಬೇಕಿದೆ ಎಂದರು.
Advertisement
ರಾಯರೆಡ್ಡಿ ಮಾನಸಿಕ ಸ್ಥಿತಿ ಕಳೆದು ಕೊಂಡಿದ್ದಾರೆ ಎಂಬ ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಬೆಂಗಳೂರಿನ ಮೆಂಟಲ್ ಆಸ್ಪತ್ರೆಗೆ ಹೋಗಲು ಸಿದ್ದನಿದ್ದೇನೆ. ಬೇಕಾದ್ರೆ ಗೋ ಮಧುಸೂದನ್ ನನ್ನನ್ನು ಕರೆದು ಕೊಂಡು ಹೋಗಲಿ. ಆಗಲಾದ್ರು ನಾನು ಮೆಂಟಲಿ ಫಿಟ್ ಎಂಬುದನ್ನು ಮಧುಸೂದನ್ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದ್ರು.
Advertisement
ದೇಶದಲ್ಲಿ ಭದ್ರತೆ ನೇಪದಲ್ಲಿ ವಿಐಪಿ ಸಂಸ್ಕೃತಿ ದೇಶದಿಂದ ತೊಲಗಬೇಕಿದೆ. ಇದರ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯಬೇಕಿದೆ ಎಂದು ಅವರು ಹೇಳಿದರು.
Advertisement
ಬಸವರಾಜ ರಾಯರೆಡ್ಡಿ ಶುಕ್ರವಾರ ಕೊಪ್ಪಳದಲ್ಲಿ ಹೇಳಿದ ಹೇಳಿಕೆಯ ವಿಡಿಯೋವನ್ನು ಇಲ್ಲಿ ನೀಡಲಾಗಿದೆ.