ಮಂಡ್ಯ: ಯಾವುದೇ ಜಿಲ್ಲೆಯ ಉಸ್ತುವಾರಿ ನಿಶ್ಚಯ ಮಾಡುವುದು ಸಿಎಂ. ಮಂಡ್ಯ ಉಸ್ತುವಾರಿ ನೇಮಕ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿಕೆಯನ್ನು ನೀಡಿದ್ದಾರೆ.
ಇಲ್ಲಿನ ಸಾತನೂರಿನ ಕಂಬದ ನರಸಿಂಹ ದೇವಸ್ಥಾನದ ಬಳಿ ನಡೆದ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಚಿವರು, ಮಂಡ್ಯ ಉಸ್ತುವಾರಿ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ. ಎಲ್ಲವನ್ನು ಸಿಎಂ ನೋಡಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಉಸ್ತುವಾರಿ ವಹಿಸಿಕೊಳ್ಳಲು ಹಿಂದೆ ಸರಿದಿದ್ದಾರೆ.
Advertisement
Advertisement
ಮಂಡ್ಯ ಜಿಲ್ಲೆಯ ಮೇಲೆ ನನಗೆ ಪ್ರೀತಿ ಬಾಂಧವ್ಯ ಇರುವುದು ಒಂದು ಭಾಗವಾದರೇ ಜವಾಬ್ದಾರಿ ಮತ್ತು ಆಡಳಿತ ಇನ್ನೊಂದು ಭಾಗ. ಇವತ್ತು ಪಕ್ಷದ ಕಾರ್ಯಕ್ರಮ ಇರುವುದರಿಂದ ಇಲ್ಲಿಗೆ ಬಂದಿದ್ದೇನೆ. ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಇಲ್ಲಿದ್ದೇನೆ ಎಂದು ಹೇಳಿದರು.
Advertisement
ಖಾಲಿ ಇರುವ ಉಸ್ತುವಾರಿಯನ್ನು ಸದ್ಯ ಸಿಎಂ ನಿರ್ವಹಣೆ ಮಾಡುತ್ತಿದ್ದಾರೆ. ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಸಿಎಂ ನಿಶ್ಚಯ ಮಾಡುತ್ತಾರೆ. ಸಿಎಂ ಯಾರನ್ನು ನಿಶ್ಚಯ ಮಾಡುತ್ತಾರೋ ಅವರು ಕೆಲಸ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಪಕ್ಷಕ್ಕೆ ಸರ್ಕಾರ ಸಹಕಾರ ನೀಡುತ್ತದೆ. ಜವಾಬ್ದಾರಿಯನ್ನು ಹೊತ್ತುಕೊಳ್ಳಲು ನಮ್ಮ ಪಕ್ಷದಲ್ಲಿ ಸಾಕಷ್ಟು ಜನರಿದ್ದಾರೆ. ಯಾರಿಗೆ ಜವಾಬ್ದಾರಿ ನೀಡಿದರೂ ಮಾಡುತ್ತಾರೆ ಎಂದರು.
Advertisement
ನನಗೆ ಉಸ್ತುವಾರಿ ನೀಡುವ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸೂಕ್ತ ಎನಿಸಿದವರಿಗೆ ಕೊಡುತ್ತಾರೆ. ಅದರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಯಾವ ಕಾಲದಲ್ಲಿ ಸಿಎಂ ಜವಾಬ್ದಾರಿಯನ್ನು ನೀಡುತ್ತಾರೋ ಅದನ್ನು ನಿರ್ವಹಿಸುವುದು ನಮ್ಮ ಕೆಲಸ ಎಂದು ನುಡಿದರು. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು
ಪ್ರವೀಣ್ (Praveen Nettaru) ಹತ್ಯೆ ಆರೋಪಿಯನ್ನ ಅಭ್ಯರ್ಥಿಯನ್ನಾಗಿಸುವ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಯಾವುದೇ ಒಬ್ಬ ವ್ಯಕ್ತಿಗೆ ಚಾರ್ಜ್ ಶೀಟ್ ಹಾಕಿಯೂ ಕಾನೂನಿನಲ್ಲಿ ಅವಕಾಶ ಇದ್ದರೆ ಇರುತ್ತದೆ ಅಷ್ಟೆ. ಕಾನೂನಿನ ಚೌಕಟ್ಟಿನಲ್ಲಿ ಅವರು ಸ್ಪರ್ಧೆ ಮಾಡುತ್ತಾರೆ. ಯಾವ ಪಕ್ಷದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂದು ನಾವು ನಿಶ್ಚಯ ಮಾಡುವುದಿಲ್ಲ. ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ಟಿಕೆಟ್ ಪಟ್ಟಿ ಬಿಡುಗಡೆ ವಿಚಾರವಾಗಿ ಚುನಾವಣೆ ಘೋಷಣೆಯಾದ ಮೇಲೆ ಟಿಕೆಟ್ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಹೇಳಿಕೆಯನ್ನು ನೀಡಿದರು.
ರಾಮನಗರದಲ್ಲಿ ಬಿಜೆಪಿ (Ramanagar BJP) ಚುನಾವಣೆ ಸ್ಟಾಟರ್ಜಿ ವಿಚಾರವಾಗಿ ಮಾತನಾಡಿದ, ಅವರು ಜನರ ವಿಶ್ವಾಸಗಳಿಸುವುದೇ ಒಂದು ಸ್ಟಾಟರ್ಜಿ. ಯಾರೇ ಸವಾಲು ಹಾಕಿದರು ಬನ್ನಿ ಎಂದು ಕರೆಯುತ್ತೇನೆ. ರಾಮನಗರದಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಲಾಗಿದೆ. ಆರೋಗ್ಯ, ಶೈಕ್ಷಣಿಕ, ಕೌಶಲ್ಯ, ಉದ್ಯೋಗ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ಆಗಿದೆ. ನಮ್ಮ ಸಾಧನೆಗಳು ಹೇಗೆ ಏನು ಅನ್ನುವುದನ್ನು ತೋರಿಸಿದ್ದೇವೆ. ರಾಮನಗರದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್, ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಂ ಸೇರಿ ಹಲವರು ಭಾಗಿಯಾಗಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k