ಉಡುಪಿ: ಬೆಳಗಾವಿ ಗಡಿ ಕ್ಯಾತೆ ತೆಗೆದಿರುವ ಶಿವಸೇನೆಗೆ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಗಡಿಯ ತಂಟೆಗೆ ಬಂದರೆ ನಾವಂತೂ ಸುಮ್ಮನಿರಲ್ಲ. ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಬಗ್ಗೆ ಕ್ಯಾತೆ ತೆಗೆದು ರಾಜಕೀಯ ಮಾಡಬೇಡಿ. ಮಹಾರಾಷ್ಟ್ರಕ್ಕೆ ಹೇಗೆ ತಿರುಗೇಟು ಕೊಡಬೇಕು ಎಂದು ನಮಗೂ ಗೊತ್ತು ಎಂದು ಹೇಳುವ ಮೂಲಕ ಶಿವಸೇನೆಗೆ ಎಚ್ಚರಿಕೆ ಕೊಟ್ಟಿದ್ದಾರೆ.
Advertisement
Advertisement
ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ಧತೆ ಇದೆ. ಸರೋಜಿನಿ ಮಹಿಷಿ ವರದಿಯನ್ನೂ ಪರಿಗಣಿಸಿ, ಕನ್ನಡಕ್ಕೆ ಅಗ್ರಸ್ಥಾನ ನೀಡುತ್ತೇವೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನನ್ನ ವೈಯ್ಯಕ್ತಿಕ ಅಭಿಪ್ರಾಯವೂ ಹೌದು ಎಂದರು.
Advertisement
ಹೈದರಾಬಾದ್ ಎನ್‍ಕೌಂಟರ್ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಯ ವಿಳಂಬ ಆಗುತ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನ್ಯಾಯ ಪರಿಪಾಲನೆ ಹೇಗೆ ಮಾಡೋದು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತೆ. ಈ ಶೂಟೌಟ್ ಬಗ್ಗೆ ಅಲ್ಲಿನ ಸರ್ಕಾರ ಇದೆ ನೋಡಿಕೊಳ್ಳುತ್ತದೆ. ಈಗಾಗಲೇ ಅಲ್ಲಿನ ಸರ್ಕಾರ ಸಮರ್ಥನೆ ನೀಡಿದೆ. ಸ್ವಯಂ ರಕ್ಷಣೆಗೆ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆಂದು ಮೇಲ್ನೋಟಕ್ಕೆ ತಿಳಿಯುತ್ತದೆ. ತನಿಖೆಯ ನಂತರ ಎಲ್ಲಾ ಸತ್ಯಸಂಗತಿಗಳು ಬೆಳಕಿಗೆ ಬರುತ್ತೆ. ನಮ್ಮೆಲ್ಲರ ದೃಷ್ಟಿಯಿಂದ ಪೊಲೀಸರ ಈ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.