ಬೆಂಗಳೂರು: ಮಂಡ್ಯ (Mandya) ಉಸ್ತುವಾರಿಯಿಂದ ಸಚಿವ ಅಶೋಕ್ (R Ashok) ಔಟ್ ಆಗಿದ್ದಾರೆ. ಗೋಬ್ಯಾಕ್ ಅಭಿಯಾನ, ಹೊಂದಾಣಿಕೆ ರಾಜಕೀಯ ಆರೋಪ ಕೇಳಿ ಬಂದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಜವಾಬ್ದಾರಿಯಿಂದ ಮುಕ್ತಿಗೊಳಿಸುವಂತೆ ಸಿಎಂ ಬೊಮ್ಮಾಯಿಗೆ (CM Basavaraj Bommai) ಅಶೋಕ್ ಪತ್ರ ಬರೆದಿದ್ದರು.
ಅಶೋಕ್ ಪತ್ರದ ಬೆನ್ನಲ್ಲೇ ಮಂಡ್ಯ ಉಸ್ತುವಾರಿ ಬದಲಾವಣೆಗೆ ಆದೇಶ ಹೊರಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ನೂತನ ಜಿಲ್ಲಾ ಉಸ್ತುವಾರಿಯಾಗಿ ಮತ್ತೆ ನಾರಾಯಣಗೌಡ ಅಥವಾ ಗೋಪಾಲಯ್ಯ ಪೈಕಿ ಯಾರಿಗೆ ಹೊಣೆ ನೀಡಲಾಗುತ್ತದೆ ಎಂಬ ಕುತೂಹಲ ಈಗ ಎದ್ದಿದೆ.
Advertisement
ಚುನಾವಣೆಯ ಮುನ್ನ ಹಲವು ಕೆಲಸಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಮಂಡ್ಯ ಉಸ್ತುವಾರಿಯಿಂದ ಮುಕ್ತಿಗೊಳಿಸಬೇಕೆಂದು ಕೋರಿ ಅಶೋಕ್ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಇದನ್ನೂ ಓದಿ: ಸಿದ್ದು-ಡಿಕೆಶಿಯನ್ನೇ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಪಿಚ್ ರಿಪೋರ್ಟ್ ತಯಾರಿಸಿದ್ಯಾ?
Advertisement
Advertisement
ಅಶೋಕ್ ಪತ್ರದಲ್ಲಿ ಏನಿತ್ತು?
ಒಂದು ತಿಂಗಳಲ್ಲಿ ದಾವಣಗೆರೆಯ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕಿದೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು ಹತ್ತು ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ನಗರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಅದರ ಜವಬ್ದಾರಿ ನನ್ನ ಮೇಲಿದೆ.
Advertisement
ಕಂದಾಯ ಇಲಾಖೆ ಆರಂಭಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜನಪ್ರಿಯವಾಗಿ ಹೊರಹೊಮ್ಮಿದೆ. ಪಕ್ಷದ ಶಾಸಕರು ಅವರ ಕ್ಷೇತ್ರಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಪಾಲ್ಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಎರಡರಿಂದ ಮೂರು ಜಿಲ್ಲೆಗಳಲ್ಲಿ ನಾನು ಪಾಲ್ಗೊಳ್ಳಬೇಕಿದೆ.
ಬಸವಣ್ಣ ಹಾಗೂ ಕೆಂಪೇಗೌಡರ ಪುತ್ಥಳಿ ಸ್ಥಾಪಿಸುವ ಉಸ್ತುವಾರಿ ಸಮಿತಿಯಲ್ಲಿ ಅಧ್ಯಕ್ಷನಾಗಿರುವ ನಾನು ಒಂದು ತಿಂಗಳೊಳಗೆ ಕೆಲಸ ಪೂರ್ಣಗೊಳಿಸಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಬೇಕಿದೆ.
14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿಯ ಅಧ್ಯಕ್ಷನಾಗಿರುವ ನಾನು ಮುಂದಿನ ಮಾರ್ಚ್ 23 ರಿಂದ 30 ರವರೆಗೆ ಚಿತ್ರ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k