ಮತ್ತೆ ಅಪಘಾತಕ್ಕೀಡಾಯ್ತು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗ್ಡೆ ಕಾರ್!

Public TV
1 Min Read
ananth kumar hegde 07 1512621085

ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಇದೀಗ ಎರಡನೇ ಬಾರಿ ಅಪಘಾತಕ್ಕೀಡಾಗಿದೆ.

ಈ ಘಟನೆ ಕುಮುಟಾದ ಯಾಣ ಕ್ರಾಸ್ ಬಳಿ ನಡೆದಿದ್ದು, ಸಚಿವ ಅನಂತ್ ಕುಮಾರ್ ಅವರ ಬೆಂಗಾವಲು ವಾಹನವೇ ಅವರ ಕಾರಿಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: ಅಪಘಾತ ನಡೆದರೂ ಕಾರು ನಿಲ್ಲಿಸದೆ ಹೋದ ಸಚಿವ ಅನಂತ್ ಕುಮಾರ್ ಹೆಗ್ಡೆ!

ಇಂದು ಸಚಿವ ಅನಂತ್ ಕುಮಾರ್ ಶಿರಸಿಯಿಂದ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಯಾಣ ಕ್ರಾಸ್ ಬಳಿ ಕಿರಿದಾಗ ರಸ್ತೆ ಇರುವುದರಿಂದ ಎದುರಿನಿಂದ ಬರುತ್ತಿದ್ದ ಬಸ್ ಹಾಗೂ ಆಲ್ಟೋ ಕಾರನ್ನು ತಪ್ಪಿಸಲು ಹೋಗಿ ಹೆಗ್ಡೆ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಘಟನೆಯಿಂದ ಸಚಿವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕುಮಟಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಂತ್ ಕುಮಾರ್ ಅವರಿಗೆ ಎರಡನೇ ಬಾರಿ ಅಪಘಾತ ಸಂಭವಿಸಿರುವುದು.  ಇದನ್ನೂ ಓದಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ ಕರೆ- ಪೊಲೀಸರಿಗೆ ದೂರು

Share This Article
Leave a Comment

Leave a Reply

Your email address will not be published. Required fields are marked *