ಚಂಡೀಗಢ: ಗಣಿಗಾರಿಕೆ ವೇಳೆ ಭೂ ಕುಸಿತವಾಗಿದ್ದು, 10 ರಿಂದ 15 ಮಂದಿ ಸಾವನ್ನಪ್ಪಿರುವ ಶಂಕೆ ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ದಡಮ್‍ನಲ್ಲಿ ನಡೆದಿದೆ.
ಇಂದು ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ ನಡೆಯುತ್ತಿದ್ದಾಗ ಭೂ ಕುಸಿತವಾಗಿದೆ. ಈ ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡ ಕುಸಿತಗೊಂಡಿರುವ ಭೂಮಿಯ ಅವಶೇಷಗಳ ಅಡಿಯಲ್ಲಿ ಹೂತು ಹೋಗಿವೆ ಎಂದು ಹೇಳಲಾಗುತ್ತಿದೆ.
Incident of a landslide in a mining quarry took place in Haryana’s Bhiwani pic.twitter.com/d7d382RxrC
— ANI (@ANI) January 1, 2022
ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು 6 ಯಂತ್ರಗಳು ಮತ್ತು ಡಂಪರ್‌ಗಳು ಹೂತುಹೋಗಿವೆ. 15ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಲುಕಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು
ಮಾಲಿನ್ಯದ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಲಯ ವಿಧಿಸಿದ್ದ ಎರಡು ತಿಂಗಳ ನಿಷೇಧವನ್ನು ಗುರುವಾರ ಹಿಂತೆಗೆದುಕೊಳ್ಳಲಾಗಿದ್ದು, ಶುಕ್ರವಾರವಷ್ಟೇ ಗಣಿಗಾರಿಕೆ ಪುನರಾರಂಭವಾಗಿತ್ತು. ಈಗಾಗಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮೃತರ ಬಗ್ಗೆ ಸ್ಥಳೀಯ ಅಧಿಕಾರಿಗಳು ಇನ್ನಷ್ಟೇ ಸ್ಪಷ್ಪನೆ ನೀಡಬೇಕಿದೆ. ಇದನ್ನೂ ಓದಿ: 50 ರೂಪಾಯಿ ಕದ್ದ ಮಗನ ಪ್ರಾಣ ತೆಗೆದ ತಂದೆ